ಶನಿವಾರ, ಮೇ 21, 2022
23 °C

‘ಮಕ್ಕಳ ಆರೋಗ್ಯದ ಕಾಳಜಿ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮಕ್ಕಳಲ್ಲಿರುವ ಮುಗ್ಧತೆಯೇ ಅವರ ಪ್ರತಿಭೆಯಾಗುತ್ತದೆ. ಮಕ್ಕಳ ಆರೋಗ್ಯ ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದ್ದು, ವಿಶೇಷವಾಗಿ ತಾಯಂದಿರು ಕಾಳಜಿ ವಹಿಸಬೇಕು ಎಂದು ಗೆಳೆಯರ ಬಳಗದ ಕಾರ್ಯದರ್ಶಿ ಡಾ.ಶ್ರವಣ ಪಂಡಿತ ಸಲಹೆ ನೀಡಿದರು. 

ಗೆಳೆಯರ ಬಳಗ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಜ್ಞಾನಗಂಗಾ ಶಿಕ್ಷಣ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಈಚೆಗೆ ಏರ್ಪಡಿಸಿದ್ದ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ 8 ಶಾಲೆಗಳ 41 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಲ್.ಕೆ.ಜಿ. ಮತ್ತು ಯು.ಕೆ.ಜಿ ವಿಭಾಗದಲ್ಲಿ ಮಕ್ಕಳಾದ ಶ್ರವಣ ಕಮ್ಮಾರ, ವಿನ್ಯಾಸ ಪಿ. ಹಿರೇಮಠ, ಹರ್ಷಿತ ಎಸ್. ಯಂಕಂಚಿ, ಮಹಮ್ಮದ್‌ ಅಕ್ತರ ನದಾಫ ಹಾಗೂ ಸ್ವರ್ಣಾ ಮುರಗೇಶ ಹುಂಬಿ ಬಹುಮಾನ ಪಡೆದರು.

1 ರಿಂದ 4ನೇ ತರಗತಿ ವಿಭಾಗದಲ್ಲಿ ಸಾಕೇತ ಪಾಗಾದಿ, ಪ್ರಣವ ಹುಲ್ಲಿಕಂತಿಮಠ, ಅಕ್ಷತಾ ಹೂಗಾರ, ಯಶಸ್‌ ಹಿರೇಮಠ, ಧೃತಿ ಕೋರಿ, ಅನನ್ಯಾ ನಡುವಿನಮಠ, ಸಮರ್ಥ ಮತ್ತೂರ, ಪ್ರಣತಿ ಅಂಬಲಿ, ನಯನಾ ಬನ್ನಿಹಟ್ಟಿ ಹಾಗೂ ಅಭಯ ಭಟ್ಟ ಬಹುಮಾನ ಗಳಿಸಿದರು.

5 ರಿಂದ 7ನೇ ತರಗತಿ ವಿದ್ಯಾರ್ಥಿ ವಿಭಾಗದಲ್ಲಿ ಸ್ಪಂದನಾ ದೇವರಗುಡ್ಡ, ಪ್ರಾರ್ಥನಾ ಮೂಲಿಮನಿ, ಮನು ನರಗುಂದ, ರಾಘವೇಂದ್ರ ಕೌದಿ, ಲಕ್ಷ್ಮಿ ಕೌದಿ ಹಾಗೂ ಪ್ರಿಯಾಂಕಾ ಅಂಬಲಿ ಪ್ರಶಸ್ತಿಗಳನ್ನು ಪಡೆದರು.

ಸಭೆಯ ಅಧ್ಯಕ್ಷತೆಯನ್ನು ಶಿಕ್ಷಣ ಸಮಿತಿಯ ಕೋಶಾಧ್ಯಕ್ಷರಾದ ವಿ.ಎಂ. ಪತ್ರಿ ವಹಿಸಿದ್ದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಗುಡಿಮನಿ, ಕಲಾವಿದ ಮಂಜುನಾಥ ವಾಲ್ಮೀಕಿ ನಿರ್ಣಾಯಕರಾಗಿ ಆಗಮಿಸಿದ್ದ ಮಧುಮತಿ ಚಿಕ್ಕೇಗೌಡರ, ಅಕ್ಕಮಹಾದೇವಿ ಹಾನಗಲ್ಲ, ಪ್ರೇಮಾ ಬೋಗಾರ, ರಾಜೇಶ್ವರಿ ಬಿಷ್ಟನಗೌಡರ, ಡಾ.ವೈಶಾಲಿ ಪಂಡಿತ ಇದ್ದರು.

ಜಿಲ್ಲಾ ಕಾರ್ಯದರ್ಶಿಗಳಾದಿ ಜಿ. ಎಂ. ಓಂಕಾರಣ್ಣನವರ ಸ್ವಾಗತಿಸಿದರು. ಕುಮಾರ ಶಿವಸಿಂಪಿ ಮತ್ತು ರಂಜನಾ ಭಟ್ಟ ಎಸ್.ಆರ್ ಹಿರೇಮಠ ವಂದಿಸಿದರು. ಮಾಲತೇಶ ಕರ್ಜಗಿ ಕಾರ್ಯಕ್ರಮ ಸಂಯೋಜಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.