ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ನ್ಯೂ ಇಂಡಿಯನ್ ಕ್ರಾಫ್ಟ್ ಪ್ರದರ್ಶನ

Published 30 ಜೂನ್ 2024, 16:13 IST
Last Updated 30 ಜೂನ್ 2024, 16:13 IST
ಅಕ್ಷರ ಗಾತ್ರ

ಹಾವೇರಿ: ದೇಶದ ವಿವಿಧ ಭಾಗಗಳಲ್ಲಿ ಹೆಸರುವಾಸಿಯಾಗಿರುವ ‘ನ್ಯೂ ಇಂಡಿಯನ್ ಕ್ರಾಫ್ಟ್’ ಪ್ರದರ್ಶನ ಜೂನ್ 19ರಿಂದ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆರಂಭವಾಗಿದ್ದು, ತರಹೇವಾರಿ ವಸ್ತುಗಳು ಖರೀದಿಗೆ ಲಭ್ಯವಿವೆ.

ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ವಿವಿಧ ವಸ್ತುಗಳ ಮಾರಾಟಗಾರರ 60ಕ್ಕೂ ಹೆಚ್ಚು ಮಳಿಗೆಗಳು ಪ್ರದರ್ಶನದಲ್ಲಿವೆ. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಕಾಶ್ಮೀರ, ಶಿಮ್ಲಾ, ಪಂಜಾಬ್, ಅಸ್ಸಾಂ, ಅರುಣಾಚಲ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕುಶಲಕರ್ಮಿಗಳ ಕರಕುಶಲ ವಸ್ತುಗಳು ಪ್ರದರ್ಶನದಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಿವೆ. ಕೈಯಿಂದ ಮಾಡಿದ ಉಡುಗೊರೆಗಳು, ಕೃತಕ ಆಭರಣಗಳು, ಅಲಂಕಾರಿಕ ವಸ್ತುಗಳು, ಗೃಹಾಲಂಕಾರ, ವಿವಿಧ ವಿನ್ಯಾಸ ಉಡುಪುಗಳು, ಸೀರೆಗಳು ಮತ್ತು ಬಟ್ಟೆಗಳು, ಪಂಜಾಬಿ ಮತ್ತು ರಾಜಸ್ಥಾನಿ ಚಪ್ಪಲ್‌ಗಳು, ಬಾಗಿಲು ಚಾಪೆ, ಹರ್ಬಲ್ ಉತ್ಪನ್ನಗಳು, ಕಾಶ್ಮೀರ್ ಶಾಲುಗಳು ಮತ್ತು ಸೂಟ್‌ಗಳು, ಖಾದಿ ಬಟ್ಟೆ, ಖಾದಿ ಕೈಮಗ್ಗಗಳು, ಗುಜರಾತಿ ಪರ್ಸ್, ಕಿಚನ್ ಸೆಟ್, ಮತ್ತು ಸಹರಾನ್‌ಪುರ ಪೀಠೋಪಕರಣಗಳು, ಚನ್ನಪಟ್ಟಣದ ಆಟಿಕೆಗಳು, ಸೌಂದರ್ಯ ವರ್ಧಕಗಳು ಪ್ರದರ್ಶನದಲ್ಲಿವೆ.

ಈ ಪ್ರದರ್ಶನವು ಜುಲೈ ಅಂತ್ಯದವರೆಗೆ ನಡೆಯಲಿದೆ. ಪ್ರದರ್ಶನಕ್ಕೆ ಉಚಿತ ಪ್ರವೇಶ ಮತ್ತು ವಾಹನ ನಿಲುಗಡೆ ಸೌಲಭ್ಯವಿದೆ. ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಘಟಕ ಅಮಿತೇಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT