ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಗೇರಿ ಕೆರೆಯಲ್ಲಿ ನೀರುನಾಯಿಗಳ ಕಲರವ

ಮೀನು ತಿಂದು ಹಾಕುತ್ತವೆ ಎಂಬುದು ಮೀನುಗಾರರ ಆತಂಕ
Last Updated 4 ಆಗಸ್ಟ್ 2021, 16:18 IST
ಅಕ್ಷರ ಗಾತ್ರ

ಹಾನಗಲ್: ಆಳದ ನದಿ ನೀರಿನಲ್ಲಿ ವಾಸಿಸುವ ನೀರು ನಾಯಿಗಳು ಹಾನಗಲ್‌ ಕಂಬಳಗೇರಿ ಕೆರೆಯಲ್ಲಿ ಕಾಣಿಸಿಕೊಂಡಿವೆ. ಸುಮಾರು 12 ನೀರು ನಾಯಿಗಳು ಇಲ್ಲಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕುರುಬಗೇರಿ ಹಿಂಭಾಗದ ಕಂಬಳಗೇರಿ ಸುಮಾರು 7 ಕೆರೆ ವ್ಯಾಪ್ತಿಯ ಪುಟ್ಟ ಕೆರೆ. ಈ ಕೆರೆ ಇಷ್ಟೊಂದು ಸಂಖ್ಯೆಯ ನೀರು ನಾಯಿಗಳ ತಾಣವಾಗಿರುವುದು ಪರಿಸರ ಪ್ರೇಮಿಗಳಿಗೆ ಕುತೂಹಲ ಮೂಡಿಸಿದೆ.

ಈ ಕೆರೆಯಲ್ಲಿ ಮೀನು ಸಾಕಾಣಿಕೆ ನಡೆಯುತ್ತದೆ. ಎರಡು ದಿನಗಳ ಹಿಂದೆ ಸ್ಥಳೀಯ ಮೀನುಗಾರರು ನೀರು ನಾಯಿಗಳನ್ನು ಪತ್ತೆ ಹಚ್ಚಿದ್ದಾರೆ. ಸುದ್ದಿ ತಿಳಿದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಬುಧವಾರ ಕೆರೆಗೆ ಭೇಟಿ ನೀಡಿದ್ದರು.

ನೀರು ನಾಯಿಗಳ ಇರುವಿಕೆಯನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕ ಡಾ.ಪ್ರಕಾಶ ಪವಾಡಿ ದೃಢಪಡಿಸಿದ್ದಾರೆ. ಕಳೆದ ತಿಂಗಳ ಜೋರು ಮಳೆಯ ಪ್ರವಾಹದಲ್ಲಿ ನೀರು ನಾಯಿಗಳು ಕಂಬಳಗೇರಿ ಸೇರಿಕೊಂಡಿರಬಹುದು ಎಂದು ಅಂದಾಜಿಸಿದ್ದಾರೆ.

2019ರ ಪ್ರವಾಹ ಸಮಯದಲ್ಲಿ ಧರ್ಮಾ ನದಿಯಲ್ಲಿ ನೀರು ನಾಯಿಗಳ ಪ್ರವೇಶವಾಗಿದೆ. ಎರಡು ವರ್ಷಗಳಿಂದ ನದಿಯಲ್ಲಿ ನೀರು ನಾಯಿ ಕಾಣಿಸಿಕೊಂಡ ಉದಾಹರಣೆಗಳಿವೆ ಎಂದು ಮೀನುಗಾರಿಕೆ ಹಿರಿಯ ಮೇಲ್ವಿಚಾರಕ ಮಾರುತಿ ಕೊರಗರ ತಿಳಿಸಿದ್ದಾರೆ.

‘ನಾಡಿನ ನಾಯಿಮರಿ ಗಾತ್ರದಲ್ಲಿವೆ ಈ ನೀರು ನಾಯಿಗಳು. ಜನರು ಸಮೀಪಿಸಿದರೆ ‘ಗುರ್ರ್‌ ಗುರ್ರ್‌...’ ಎಂದು ಶಬ್ದ ಹೊರಡಿಸುತ್ತವೆ. ಕೆರೆಯಲ್ಲಿನ ಮೀನು ತಿಂದು ಖಾಲಿ ಮಾಡುವ ಮುನ್ನವೇ ನೀರು ನಾಯಿಗಳನ್ನು ಸಾಗ ಹಾಕಬೇಕು’ ಎಂದು ವಿಶಾಲ ಕರ್ನಾಟಕ ಮೀನುಗಾರರ ಸಂಘದ ಅಧ್ಯಕ್ಷ ಮುನೀರ್‌ ಅಹ್ಮದ್‌ ಪಾಳಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT