ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನದ ದುರಸ್ತಿಗಾಗಿ ₹1,92,648 ವೆಚ್ಚ ಪಾವತಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಇನ್ಸೂರೆನ್ಸ್ ಕಂಪನಿಗೆ ಗ್ರಾಹಕರ ಆಯೋಗ ಆದೇಶ
Last Updated 5 ಡಿಸೆಂಬರ್ 2022, 16:00 IST
ಅಕ್ಷರ ಗಾತ್ರ

ಹಾವೇರಿ: ವಾಹನದ ವಿಮಾ ಮೊತ್ತ ಪಾವತಿಸುವಂತೆ ಬಜಾಜ್‌ ಅಲಿಂಜಾ ಜನರಲ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಹಾನಗಲ್ ತಾಲ್ಲೂಕಿನ ಹಿರೂರ ಗ್ರಾಮದ ಮಹ್ಮದ್‌ ಜಹೀರ್‌ ಇಮಾಮಸಾಬ್‌ ಹಂಚಿಮನಿ ಅವರು ಖರೀದಿಸಿದ ಕಾರಿಗೆ ಬಜಾಜ್‌ ಅಲಿಂಜಾ ಜನರಲ್ ಇನ್ಸೂರನ್ಸ್ ಕಂಪನಿಯಲ್ಲಿ ವಿಮಾ ಪಾಲಿಸಿ ಮಾಡಿಸಿದ್ದರು. ಜ.16ರಂದು ಹಾವೇರಿ-ಹಾನಗಲ್ ರಸ್ತೆಯಲ್ಲಿ ಕಾರು ಹತೋಟಿ ತಪ್ಪಿ ಕಲ್ಲಿಗೆ ಡಿಕ್ಕಿ ಹೊಡೆದಿತ್ತು. ವಾಹನದ ದುರಸ್ತಿಗಾಗಿ ₹1,92,648 ವೆಚ್ಚ ಮಾಡಿದ್ದರು. ಅಗತ್ಯ ದಾಖಲೆಯೊಂದಿಗೆ ವಿಮಾ ಕಂಪನಿಗೆ ಪರಿಹಾರ ನೀಡಲು ವರದಿ ಸಲ್ಲಿಸಿದ್ದರು. ವಿಮಾ ಕಂಪನಿ ಪಾಲಿಸಿ ಹಣ ನೀಡಲು ನಿರಾಕರಿಸಿದ ಕಾರಣ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯರಾದ ಉಮಾದೇವಿ ಎಸ್.ಹಿರೇಮಠ ಅವರು, ಕಾರಿನ ರಿಪೇರಿ ವೆಚ್ಚ ₹1,29,261, ಇತರೆ ವೆಚ್ಚಗಳಾದ ಟೋಯಿಂಗ್ ಚಾರ್ಜ್ ₹3,210 ಮತ್ತು ಪಾರ್ಕಿಂಗ್ ಚಾರ್ಜ್‌₹3,600 ಸೇರಿ ₹1,36,071 ಮೊತ್ತವನ್ನು 30 ದಿನದೊಳಗಾಗಿ ನೀಡಲು ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗೆ ₹2 ಸಾವಿರ, ಪ್ರಕರಣದ ಖರ್ಚು ₹2 ಸಾವಿರಗಳನ್ನು ಪಾವತಿಸಲು ಆದೇಶಿಸಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT