ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿ ಕಾಣದ ಹಾವಣಗಿ ಬಡಾವಣೆ: ಮೂಲ ಸೌಲಭ್ಯಕ್ಕಾಗಿ ಮನವಿ

Published 5 ಜುಲೈ 2024, 15:31 IST
Last Updated 5 ಜುಲೈ 2024, 15:31 IST
ಅಕ್ಷರ ಗಾತ್ರ

ಸವಣೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಹಾವಣಗಿ ಪ್ಲಾಟ್‌ನಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಉಪ ವಿಭಾಗಾಧಿಕಾರಿ ಮಹಮ್ಮದ ಖಿಜರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಮೊದಲು ನಿರ್ಮಾಣಗೊಂಡಿದ್ದ ಹಾವಣಗಿ ಪ್ಲಾಟ್ ಬಡಾವಣೆ ಅಭಿವೃದ್ಧಿ ಕಾಣದೇ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಕಳೆದ 20 ವರ್ಷಗಳಿಂದ ಇಲ್ಲಿನ ರಸ್ತೆಗಳು ಹಾಗೂ ಚರಂಡಿಗಳ ನಿರ್ಮಾಣ ಅರಬರೆಯಾಗಿ ನಿರ್ಮಾಣಗೊಂಡಿವೆ. ಚರಂಡಿಗಳು ತುಂಬಿ ತುಳುಕಿ ರಸ್ತೆಗೆ ಹರಿದರು ಸಹ ಪುರಸಭೆ ಇತ್ತ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ.

ಹಾವಣಗಿ ಪ್ಲಾಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳುವ, ಕುರಿತು ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಂಡು ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೆ ಇದ್ದರೆ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಬಿ.ಎಂ.ಪಾಟೀಲ, ಗೋವಿಂದ ತಿರುಮಲೆ, ಕುಮಾರಸ್ವಾಮಿ ಹಿರೇಮಠ, ಪರಶುರಾಮ ಅರಿಶಿನಪುಡಿ, ಎನ್.ಎ. ಚೆಂಗಾಪುರ, ಮಂಜುನಾಥ ಗಿತ್ತೆ, ರತ್ನವ್ವ ಕಾಟೇನಹಳ್ಳಿ, ಲಲಿತಾ ತಿರುಮಲೆ, ರೇಖಾ ಕಾಳೆ, ಉಮಾ ತಿರುಮಲೆ, ದೇವಕ್ಕಾ ಗಡೆಪ್ಪನವರ, ನೀಲಮ್ಮ ತೆಗ್ಗಿಹಳ್ಳಿ, ಕರಬಸಮ್ಮ ತೆಗ್ಗಿಹಳ್ಳಿ, ಶಾಂತವ್ವ ಹಿಂಚಿಗೇರಿ, ಗೀತಾ ಬಳಿಗೇರ, ಶೈಲಾ ಯಂಕಣ್ಣನವರ, ಲಲಿತಾ ರಾಶಿನಕರ, ರಾಜೇಶ್ವರಿ ಕರ್ನೂಲ, ಶೋಭಾ ಕಲ್ಮಠ, ಉಮಾ ತಿರುಮಲೆ, ಲತಾ ತಿರುಮಲೆ, ಶ್ವೇತಾ ಪಾಟೀಲ, ನಾಗರತ್ನ ಈಳಗೇರ, ರೂಪ ತೆಗ್ಗಿಹಳ್ಳಿ, ರೇಣುಕಾ ಗೋಣಿರ, ರಾಜೇಶ್ವರಿ ಅಮಾತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT