ಅಕ್ಕಿಆಲೂರಿನಲ್ಲಿ ಬೃಹತ್ ಪ್ರತಿಭಟನೆ

7

ಅಕ್ಕಿಆಲೂರಿನಲ್ಲಿ ಬೃಹತ್ ಪ್ರತಿಭಟನೆ

Published:
Updated:
Deccan Herald

ಅಕ್ಕಿಆಲೂರ: ಪಟ್ಟಣದ ವಿವಿಧ ಶಾಲೆ, ಕಾಲೇಜುಗಳ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ ಬೃಹತ್ ಪ್ರತಿಭಟನೆ ನಡೆಸಿ, ಹಾವೇರಿಯ ಜಿ.ಎಚ್.ಕಾಲೇಜಿನ ವಿದ್ಯಾರ್ಥಿನಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.

ಎನ್‌.ಡಿ.ಪಿ.ಯು ಕಾಲೇಜಿನಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಕಲ್ಲಾಪುರ ಸರ್ಕಲ್, ಬಸ್ ನಿಲ್ದಾಣ, ಅಂಬೇಡ್ಕರ್ ಸರ್ಕಲ್, ಪೇಟೆ ಓಣಿ ಮುಖಾಂತರ ಸಾಗಿ ಸಿಂಧೂರ ಸಿದ್ದಪ್ಪ ಸರ್ಕಲ್ ತಲುಪಿತು. ಅಲ್ಲಿ ಶಿರಸಿ–ಮೊಳಕಾಲ್ಮುರು ರಾಜ್ಯ ಹೆದ್ದಾರಿ ತಡೆ ನಡೆಸಲಾಯಿತು. ಹತ್ಯೆಗೈಯ್ದವರಿಗೆ ಕಠಿಣ ಶಿಕ್ಷೆ ನೀಡುವಂತೆ ಘೋಷಣೆ ಕೂಗಲಾಯಿತು. ಕೈಗೆ ಕಪ್ಪುಪಟ್ಟಿ ಧರಿಸಿದ್ದ ವಿದ್ಯಾರ್ಥಿಗಳು ವಿದ್ಯಾರ್ಥಿನಿ ಹತ್ಯೆಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.

ಮುಖಂಡ ವೀರೇಶ ನೆಲವಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಟಾಕನಗೌಡ ಪಾಟೀಲ, ಮಾಜಿ ಸದಸ್ಯ ಕೃಷ್ಣ ಈಳಿಗೇರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರದೀಪ ಶೇಷಗಿರಿ, ಸದಸ್ಯ ಶಿವಾನಂದ ದೇಸಾಯಿ, ಮುಖಂಡರಾದ ರಾಜಣ್ಣ ಅಂಕಸಖಾನಿ, ವಿಶ್ವನಾಥ ಭಿಕ್ಷಾವರ್ತಿಮಠ, ಗಿರೀಶ ಕರಿದ್ಯಾವಣ್ಣನವರ, ಪವನ ಜಾಬೀನ್, ನಂದೀಶ್ ಗೋದಿ, ಯಲ್ಲಪ್ಪ ಕೊರಚರ, ಪ್ರಭು ಮುಷ್ಠಿ, ಅಮರ್ ಬೆಲ್ಲದ, ಹರೀಶ್ ಹಾನಗಲ್, ಪ್ರಭು ಹೂಗಾರ, ಸಾಗರ ಕೋರಿ, ಆದರ್ಶ ಅಂಕಸಖಾನಿ, ಪ್ರವೀಣ ಕಲಾಲ, ಶಂಭು ಹಿರೇಮಠ, ಮಂಜುನಾಥ ಪಾವಲಿ, ರಾಜಶೇಖರ ಪರೆಗೊಂಡರ, ಶಿವಯೋಗಿ ಹಿರೇಮಠ ಈ ವೇಳೆ ಇದ್ದರು.

ಎನ್‌.ಡಿ.ಪಿ.ಯು, ಎಸ್‌.ಎಸ್‌.ಪಿ.ಯು ಹಾಗೂ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಚಾರ್ಯರು, ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !