ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಮಿಕರ ಕಿಟ್‌ ವಿತರಣೆಯಲ್ಲಿ ಅವ್ಯಹಾರ’

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
Last Updated 9 ಆಗಸ್ಟ್ 2021, 16:37 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಕಾರ್ಮಿಕರ ಕಿಟ್ ವಿತರಣೆಯಲ್ಲಿ ಆದ ಅವ್ಯವಹಾರದ ಸಮಗ್ರ ತನಿಖೆಗೆ ತಾಲ್ಲೂಕು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್‌ ಘಟಕ ಹಾಗೂ ತಾಲ್ಲೂಕು ಕಾರ್ಮಿಕರ ಒಕ್ಕೂಟಗಳ ಪದಾಧಿಕಾರಿಗಳು ಸೋಮವಾರ ಆಗ್ರಹಿಸಿದರು.

ಕಾರ್ಮಿಕರ ಸಂಘಟನೆಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಶಂಕರ್‌ ಜಿ.ಎಸ್‌. ಅವರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್‌ ಯುವ ಮುಖಂಡ ಪ್ರಕಾಶ ಕೋಳಿವಾಡ ಮಾತನಾಡಿ, ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗವಿಲ್ಲದೇ ತೊಂದರೆಗೀಡಾದ ಕಾರ್ಮಿಕರಿಗೆ ವಿತರಣೆ ಮಾಡಲು ರಾಜ್ಯ ಸರ್ಕಾರದಿಂದ 8 ಸಾವಿರ ಕಿಟ್‌ಗಳು ಬಂದಿದ್ದವು. ನಮ್ಮ ಸಂಘಟನೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ದಿನಸಿ ಕಿಟ್‌ಗಳನ್ನು ನೀಡದೆ ಸ್ಥಳೀಯ ಕಾರ್ಮಿಕದಲ್ಲದವರಿಗೆ ಮತ್ತು ನೋಂದಾಯಿತ ಕಾರ್ಮಿಕದಲ್ಲದವರಿಗೆ ಕಿಟ್‌ ವಿತರಿಸಿದ್ದಾರೆ ಎಂದು ಆರೋಪಿಸಿದರು.

ಕಿಟ್‌ ವಿತರಣೆಯಲ್ಲಿ ಕಾರ್ಮಿಕರಿಗೆ ಸಾಕಷ್ಟು ಅನ್ಯಾಯವಾಗಿದೆ. ನಿಜವಾದ ಕಾರ್ಮಿಕರಿಗೆ ಕಿಟ್‌ಗಳು ತಲುಪಿಲ್ಲ. ಇದರಲ್ಲಿ ಶಾಸಕರಿಗೆ ಬೇಕಾದವರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ದೂರಿದರು.

ಕಿಟ್ ವಿತರಣೆಯಲ್ಲಿ ಆದ ಅವ್ಯವಹಾರಕ್ಕೆ ಕಾರಣವಾದವರ ವಿರುದ್ಧ ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ರವೀಂದ್ರಗೌಡ ಪಾಟೀಲ, ನಿಂಗರಾಜ ಕೋಡಿಹಳ್ಳಿ, ಪುಟ್ಟಪ್ಪ ಮರಿಯಮ್ಮನವರ, ಇಕ್ಬಾಲ್‌ಸಾಬ್‌ ರಾಣೆಬೆನ್ನೂರು, ಏಕಾಂತ ಮುದಿಗೌಡ್ರ, ಬಸವರಾಜಪ್ಪ ಸವಣೂರ, ಹನುಮಂತಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT