ರಟ್ಟೀಹಳ್ಳಿ: ಪಟ್ಟಣ ಪಂಚಾಯಿತಿ ಚುನಾವಣೆ ಅಗಸ್ಟ್ –17ರಂದು ಜರುಗಲಿದ್ದು, ಈಗಾಗಲೇ ತಾಲ್ಲೂಕು ಆಡಳಿತ ಮತ್ತು ಚುನಾವಣಾ ಸಿಬ್ಬಂದಿ ಅಂತಿಮ ಮತದಾರರ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ತಹಶೀಲ್ದಾರ್ ಕಾರ್ಯಾಲಯ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸೂಚನಾ ಫಲಕದಲ್ಲಿ ಸಾರ್ವಜನಿಕವಾಗಿ ಪ್ರಚಾರ ಪಡಿಸಲಾಗಿದೆ ಎಂದು ತಹಶೀಲ್ದಾರ್ ಶ್ವೇತಾ ಅಮರಾವತಿ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ 15 ವಾರ್ಡ್ಗಳಿಂದ 15 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 5,869 ಪುರುಷರು, ಮತ್ತು 5,842 ಮಹಿಳೆಯರು ಹಾಗೂ ಇತರೆ ಒಬ್ಬರು ಸೇರಿ ಒಟ್ಟು 11,712 ಮತದಾರರಿದ್ದಾರೆ. ಪ್ರತಿಯೊಂದು ವಾರ್ಡ್ಗಳಿಗೆ ಪ್ರತ್ಯೇಕವಾಗಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಪಟ್ಟಣದ ಸಮಗ್ರ ಕೃಷಿ ಪದ್ಧತಿಯ ಕಾರ್ಯಾಲಯವನ್ನು ಚುನಾವಣಾಧಿಕಾರಿಗಳ ಕಾರ್ಯಾಲಯವನ್ನಾಗಿ ಮಾಡಲಾಗಿದ್ದು, ವಾರ್ಡ್ ಸಂಖ್ಯೆ 1ರಿಂದ 8ನೇ ವಾರ್ಡ್ವರೆಗೆ ಚುನಾವಣಾಧಿಕಾರಿ ಡಿ.ಮಹಾದೇವ ಮತ್ತು ಸಹಾಯಕ ಚುನಾವಣಾಧಿಕಾರಿ ಬಿ.ಆರ್. ತೆವರಿ ಮತ್ತು 9 ರಿಂದ 15ನೇ ವಾರ್ಡ್ಗಳಿಗೆ ಚುನಾವಣಾಧಿಕಾರಿ ಗಂಗರಾಜು ಮತ್ತು ಸಹಾಯಕ ಚುನಾವಣಾಧಿಕಾರಿ ಶಿವಪ್ಪ ಸಣ್ಣಶಿವಣ್ಣನವರ ಅವರನ್ನು ನೇಮಿಸಲಾಗಿದೆ.

ಪಟ್ಟಣ ಪಂಚಾಯಿತಿ ಚುನಾವಣೆಗೆ ತಾಲ್ಲೂಕು ಆಡಳಿತ ಚುನಾವಣೆ ಸಿಬ್ಬಂದಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಸಹಯೋಗದಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜುಲೈ 29ರಿಂದ ನಾಮಪತ್ರ ಸ್ವೀಕಾರ ಪ್ರಾರಂಭವಾಗಿದೆ. ಪಟ್ಟಣದಲ್ಲಿ ಪಾರದರ್ಶಕ ಮತದಾನಕ್ಕೆ ಸಾರ್ವಜನಿಕರು ಶಾಂತಿಯಿಂದ ಸಹಕರಿಸಬೇಕು ಎಂದು ತಹಶೀಲ್ದಾರ್ ಶ್ವೇತಾ ಅಮರಾವತಿ ತಿಳಿಸಿದ್ದಾರೆ.

1ನೇ ವಾರ್ಡ್ನಲ್ಲಿ 1041 ಮತದಾರರು

ಮತಕೇಂದ್ರ ಸರ್ಕಾರಿ ಪದವಿಪೂರ್ವ ಕಾಲೇಜು (ಹಳೇ ಕಟ್ಟಡ) 2ನೇ ವಾರ್ಡ್ 804 ಮತದಾರರು ಕುಮಾರೇಶ್ವರ ಪಿ.ಯು. ಕಾಲೇಜು 3ನೇ ವಾರ್ಡ್ 774 ಮತದಾರರು ಕುಮಾರೇಶ್ವರ ಪ್ರೌಢಶಾಲೆ 4ನೇ ವಾರ್ಡ್ 835 ಮತದಾರರು ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಎಡಭಾಗದ ಕೊಠಡಿ 5ನೇ ವಾರ್ಡ್ 719 ಮತದಾರರು ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಬಲಭಾಗದ ಕೊಠಡಿ 6ನೇ ವಾರ್ಡ್ 1134 ಮತದಾರರು ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆ 7ನೇ ವಾರ್ಡ್ 679 ಮತದಾರರು ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ 8ನೇ ವಾರ್ಡ್ 544 ಮತದಾರರು ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ (ತೋಟಗಂಟಿ) 9ನೇ ವಾರ್ಡ್ 623 ಮತದಾರರು ಪಟ್ಟಣ ಪಂಚಾಯಿತಿ ಕಚೇರಿ ಬಲಭಾಗದ ಕೊಠಡಿ 10ನೇ ವಾರ್ಡ್ 936 ಮತದಾರರು ಪಟ್ಟಣ ಪಂಚಾಯಿತಿ ಕಚೇರಿ ಎಡಭಾಗದ ಕೊಠಡಿ 11ನೇ ವಾರ್ಡ್ 747 ಮತದಾರರು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಎಡಭಾಗದ ಕೊಠಡಿ 12ನೇ ವಾರ್ಡ್ 551 ಮತದಾರರು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಬಲಭಾಗದ ಕೊಠಡಿ 13ನೇ ವಾರ್ಡ್ 787 ಮತದಾರರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ 14ನೇ ವಾರ್ಡ್ 1061 ಮತದಾರರು ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಜನತಾ ಪ್ಲಾಟ್ 15ನೇ ವಾರ್ಡ್ 477 ಮತದಾರರು ಸರ್ಕಾರಿ ಪದವಿ ಪೂರ್ವ ಕಾಲೇಜು (ಹೊಸಕಟ್ಟಡ) ಮತ ಕೇಂದ್ರಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.