ಶುಕ್ರವಾರ, ಮಾರ್ಚ್ 24, 2023
22 °C

ಹಾವೇರಿ: ‘ರೆಲ್ಲೋ ಪ್ಲೇಕ್‌’ ನಾಮಫಲಕ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರಕ್ಕೆ 1939ರಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಭೇಟಿ ನೀಡಿದ ಸವಿನೆನಪಿಗಾಗಿ ‘ರೆಲ್ಲೋ ಪ್ಲೇಕ್‌’ ನಾಮಫಲಕವನ್ನು ಯುವ ಬ್ರಿಗೇಡ್‌ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಬುಧವಾರ ಅನಾವರಣಗೊಳಿಸಿದರು. 

ನಂತರ ಸೂಲಿಬೆಲೆಯವರು ಹುಕ್ಕೇರಿಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಿದರು. ನಂತರ ಯುವ ಬ್ರಿಗೇಡ್‌ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕಾರ್ಯಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸಿದರು. 

ರಾಜ್ಯ ಸಂಚಾಲಕ ಕಿರಣ್‌ ರಾಮು, ಅಭಿಷೇಕ ಉಪ್ಪಿನ, ಪ್ರಮೋದ್‌ ಮೆಳ್ಳಗಟ್ಟಿ, ಅಕ್ಷಯ ಕಲಾಲ್‌ ಇತರರು ಇದ್ದರು. 

ಬೋಸ್‌ ನೆನಪು:

1938ರ ಹರಿಪುರ ಕಾಂಗ್ರೆಸ್‌ ಅಧಿವೇಶನ ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷತೆಯ ಚುನಾವಣೆಯಲ್ಲಿ ಮಹಾತ್ಮ ಗಾಂಧೀಜಿಯವರ ಅಭ್ಯರ್ಥಿಯಾದ ಪಟ್ಟಾ ಸೀತಾರಾಮಯ್ಯನವರನ್ನು ಸೋಲಿಸಿ, ಸುಭಾಷ್‌ಚಂದ್ರ ಬೋಸರು ಅಧ್ಯಕ್ಷರಾದರು. ತಮ್ಮ ಗೆಲುವಿಗೆ ಸಹಕರಿಸಿದ ಹಾವೇರಿಯ ಜನತೆ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಭೇಟಿ ನೀಡಿದ್ದರು.  

ಹಾವೇರಿ ನಗರದ ತುಂಬಾ ಹಸಿರು ತೋರಣ ಕಟ್ಟಲಾಗಿತ್ತು. ಕರೆಯ ಪಕ್ಕದಲ್ಲಿರುವ ಶಿವಾನಂದ ಥಿಯೇಟರ್‌ (ಈಗಿನ ದಾನೇಶ್ವರಿ ಕಲಾ ಮಂದಿರ) ಬಳಿ ಇವರ ಬರುವಿಕೆಗಾಗಿ ಜನರು ಕಾಯುತ್ತಿದ್ದರು ಎಂದು ಯುವ ಬ್ರಿಗೇಡ್‌ ಮುಖಂಡರು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.