ಬುಧವಾರ, ಅಕ್ಟೋಬರ್ 28, 2020
28 °C

ಸೀಮಂತ ಕಾರ್ಯಕ್ರಮದಲ್ಲಿ ಸಸಿ ನೀಡಿ ಪರಿಸರ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ತಾಲ್ಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ಸಂತೋಷ ಕುಮಾರಯ್ಯ ಪತ್ನಿ ಸುಪ್ರಿಯಾ ಸೀಮಂತ ಕಾರ್ಯಕ್ರಮದಲ್ಲಿ ಸಂಬಂಧಿಗಳಿಗೆ ಸಸಿ ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಸಂತೋಷ ಕುಮಾರಯ್ಯ ಅವರ ಪತ್ನಿ ಸುಪ್ರಿಯಾ ಪರಿಸರ ಪ್ರೇಮಿಯಾಗಿದ್ದು, ಕಳೆದ ವರ್ಷದಲ್ಲಿ ನಡೆದ ಅವರ ವಿವಾಹ ಸಮಾರಂಭದಲ್ಲಿ ಸಂಬಂಧಿಗಳಿಗೆ ನೆನಪಿನ ಕಾಣಿಕೆಯಾಗಿ ಮಾವಿನ ಸಸಿಗಳನ್ನು ವಿತರಿಸಿದ್ದರು. ಈಗ ನಡೆದ ಅವರ ಸೀಮಂತ ಕಾರ್ಯಕ್ರಮದಲ್ಲಿ ವಿಶೇಷ ಕಾಳಜಿ ವಹಿಸಿ ಬಂಧು– ಬಾಂಧವರಿಗೆ ವಿವಿಧ ತಳಿಗಳ ಸಸಿಗಳನ್ನು ವಿತರಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಸುಪ್ರಿಯಾ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಉತ್ತಮ ಪರಿಸರದಿಂದ ಆರೋಗ್ಯಯುತ ನಾಡು ನಿರ್ಮಾಣವಾಗಲು ಸಾಧ್ಯವಿದೆ. ಮಕ್ಕಳ ಪಾಲನೆ– ಪೋಷಣೆ ಮಾಡಿದಂತೆ ಪ್ರತಿ ಸಸಿಗಳನ್ನು ಬೆಳೆಸಬೇಕು. ಅದರಿಂದ ನಾಡಿಗೆ ಉತ್ತಮ ಸಂದೇಶ ನೀಡಬೇಕೆಂಬ ಉದ್ದೇಶದಿಂದ ಈ ಸಸಿಗಳು ವಿತರಿಸುವ ಜತೆಗೆ ನಾವು ಸಸಿಗಳನ್ನು ನೆಟ್ಟು ಅವುಗಳು ಬೆಳೆಯುವ ವರೆಗೆ ಕಾಳಜಿ ವಹಿಸುತ್ತೇವೆ ಎಂದರು.

ಶಿಗ್ಗಾವಿ ಎಪಿಎಂಸಿ ಸದಸ್ಯ ತಿಪ್ಪಣ್ಣ ಸಾತಣ್ಣವರ, ಗ್ರಾಮ ಪಂಚಾಯ್ತಿ ಸದಸ್ಯ ರಮೇಶ ಸಾತಣ್ಣವರ, ಜನಪದ ಕಲಾವಿದ ಗದಿಗಯ್ಯ ಹಿರೇಮಠ ಸೇರಿದಂತೆ ಸುತ್ತಲಿನ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.