ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಶಕ್ತಿ’ಗೆ ವರ್ಷ: 5.84 ಕೋಟಿ ಮಹಿಳೆಯರು ಹರ್ಷ

ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ; ₹ 171.15 ಕೋಟಿ ಸಂಗ್ರಹ | ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ
Published 16 ಜೂನ್ 2024, 5:58 IST
Last Updated 16 ಜೂನ್ 2024, 5:58 IST
ಅಕ್ಷರ ಗಾತ್ರ

ಹಾವೇರಿ: ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಯೋಜನೆ ಜಾರಿಯಾದ ಒಂದು ವರ್ಷದಲ್ಲಿ 5.84 ಕೋಟಿ ಮಹಿಳೆಯರು, ₹ 171.15 ಕೋಟಿ ಮೊತ್ತದ ‘ಶಕ್ತಿ’ ಟಿಕೆಟ್ ಖರೀದಿಸಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

2023ರ ಜೂನ್ 11ರಂದು ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ನೀಡಲಾಗಿತ್ತು. ಪ್ರಸಕ್ತ ಜೂನ್ 11ರಂದು ಯೋಜನೆಗೆ ಒಂದು ವರ್ಷವಾಗಿದ್ದು, ಜಿಲ್ಲೆಯ ಅಂಕಿ–ಅಂಶ ಗಮನಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಜಿಲ್ಲೆಯಿಂದ ಅಕ್ಕ–ಪಕ್ಕದ ಜಿಲ್ಲೆಗಳ ಬಸ್‌ಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕುಕ್ಕೆ, ಬೆಳಗಾವಿ ಜಿಲ್ಲೆಯ ಸವದತ್ತಿ, ವಿಜಯನಗರ ಜಿಲ್ಲೆಯ ಮೈಲಾರ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎರಡೂ ನಿಗಮಗಳ ಬಸ್‌ಗಳು ಹಾವೇರಿ ಮೂಲಕ ಸಂಚರಿಸುತ್ತವೆ. ಈ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದು ನಿತ್ಯವೂ ಕಾಣಸಿಗುತ್ತಿದೆ.

ಆಸ್ಪತ್ರೆ, ಪ್ರವಾಸ, ಮದುವೆ ಸಮಾರಂಭ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪರ ಊರುಗಳಿಗೆ ಹೋಗುವ ಮಹಿಳೆಯರು, ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿಯೇ ಯೋಜನೆ ಜಾರಿಯಾದ ಒಂದೇ ವರ್ಷದಲ್ಲಿ 5.84 ಕೋಟಿ ಮಹಿಳೆಯರು ‘ಶಕ್ತಿ’ ಬಸ್‌ ಬಳಸಿದ್ದಾರೆ. ಇದೇ ಅವಧಿಯಲ್ಲಿ ಒಟ್ಟು 9.59 ಕೋಟಿ ಮಂದಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.

‘ಶಕ್ತಿ ಯೋಜನೆ ಮಾದರಿ ಯೋಜನೆಯಾಗಿದೆ. ಆದರೆ, ಹಲವು ಕಡೆಗಳಲ್ಲಿ ಬಸ್‌ಗಳ ವ್ಯವಸ್ಥೆ ಸರಿಯಿಲ್ಲ. ಹೆಚ್ಚುವರಿ ಬಸ್‌ ಬಿಡಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಬ್ಯಾಡಗಿಯ ಉದ್ಯೋಗಸ್ಥ ಮಹಿಳೆ ಸರೋಜಾ ಆಗ್ರಹಿಸಿದರು.

ರಾಣೆಬೆನ್ನೂರು ಮೊದಲು: ಶಕ್ತಿ ಯೋಜನೆ ಬಳಕೆಯಲ್ಲಿ ರಾಣೆಬೆನ್ನೂರು ಘಟಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಹಾವೇರಿ, ಹಾನಗಲ್, ಹಿರೇಕೆರೂರ, ಬ್ಯಾಡಗಿ ಹಾಗೂ ಸವಣೂರು ಘಟಕಗಳಿವೆ.

ವಾರ್ಷಿಕ ಅಂಕಿ – ಅಂಶ ಒಟ್ಟು 9.59 ಕೋಟಿ ಮಂದಿ ಪ್ರಯಾಣ ರಾಣೆಬೆನ್ನೂರು ಘಟಕ ಮೊದಲುಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕ ಸ್ವಾವಲಂಬನೆಗೆ ಮಾದರಿಯಾಗಿರುವ ಶಕ್ತಿ ಯೋಜನೆ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ. ಯೋಜನೆಯ ಲಾಭ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಬೇಕು ಸಂಹಿತಾ ರವಿ ಗೋಣೆಪ್ಪನವರ ರಾಣೆಬೆನ್ನೂರು

ಹಾವೇರಿ ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಮಹಿಳೆಯರು ವಿದ್ಯಾರ್ಥಿನಿಯರು ಉದ್ಯೋಗಸ್ಥ ಮಹಿಳೆಯರು ಇತರರು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ
ಶಶಿಧರ ಕುಂಬಾರ ಹಾವೇರಿ ವಿಭಾಗೀಯ ವ್ಯವಸ್ಥಾಪಕ
ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕ ಸ್ವಾವಲಂಬನೆಗೆ ಮಾದರಿಯಾಗಿರುವ ಶಕ್ತಿ ಯೋಜನೆ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ. ಯೋಜನೆಯ ಲಾಭ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಬೇಕು
ಸಂಹಿತಾ ರವಿ ಗೋಣೆಪ್ಪನವರ ರಾಣೆಬೆನ್ನೂರು

ಶಕ್ತಿ’ಯಿಂದ ತೊಂದರೆ: ವಿದ್ಯಾರ್ಥಿಗಳ ಆಕ್ರೋಶ ಶಕ್ತಿ ಯೋಜನೆಗಳಿಂದಾಗಿ ಬಸ್‌ಗಳು ಮಹಿಳೆಯರಿಂದ ಸಂಪೂರ್ಣ ಭರ್ತಿಯಾಗುತ್ತಿವೆ. ಪುರುಷರಿಗೂ ಬಸ್‌ಗಳಲ್ಲಿ ನಿಲ್ಲಲು ಜಾಗ ಸಿಗುತ್ತಿಲ್ಲ. ಇದೀಗ ಶಾಲೆ–ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳ ಪ್ರಯಾಣಕ್ಕೆ ತೀವ್ರ ತೊಂದರೆ ಉಂಟಾಗಿರುವ ದೂರುಗಳು ಬರುತ್ತಿವೆ. ‘ಹಳ್ಳಿಗಳಿಂದ ನಗರಗಳಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳು ಬಸ್‌ಗಳನ್ನು ಅವಲಂಬಿಸಿದ್ದಾರೆ. ಆದರೆ ಈಗ ಬಸ್‌ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಚಾಲಕರು ಹಾಗೂ ನಿರ್ವಾಹಕರು ವಿದ್ಯಾರ್ಥಿಗಳನ್ನು ಬಿಟ್ಟು ಹೋಗುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ‘ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹೆಚ್ಚುವರಿ ಬಸ್‌ಗಳನ್ನಾದರೂ ಬಿಡಬೇಕು’ ಎಂದು ಆಗ್ರಹಿಸುತ್ತಿದ್ದಾರೆ.

ಘಟಕವಾರು ಅಂಕಿ–ಅಂಶ (2024ರ ಜನವರಿ 1ರಿಂದ ಜೂನ್ 11ರವರೆಗೆ) ಘಟಕ; ಒಟ್ಟು ಪ್ರಯಾಣಿಕರು (ಲಕ್ಷಗಳಲ್ಲಿ); ಮಹಿಳಾ ಪ್ರಯಾಣಿಕರು (ಲಕ್ಷಗಳಲ್ಲಿ); ಮಹಿಳಾ ಪ್ರಯಾಣಿಕರ ಶಕ್ತಿ ಟಿಕೆಟ್ ದರ (₹ ಕೋಟಿಗಳಲ್ಲಿ) ಹಾವೇರಿ; 80.13; 49.88; 15.18 ಹಿರೇಕೆರೂರ; 75.55; 47.67; 13.54 ರಾಣೆಬೆನ್ನೂರು; 89.97; 53.71; 16.90 ಹಾನಗಲ್; 75.61; 49.94; 14.23 ಬ್ಯಾಡಗಿ; 55.00; 33.45; 10.36  ಸವಣೂರು; 48.31; 30.84; 7.37

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT