ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಶತಕ ದಾಖಲಿಸಿದ ಶಿಗ್ಗಾವಿಯ ಗಂಗವ್ವ

ಅಂತರರಾಷ್ಟೀಯ ಮಟ್ಟದ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಸಾಧನೆ
ಎಂ.ವಿ.ಗಾಡದ
Published 29 ಡಿಸೆಂಬರ್ 2023, 5:28 IST
Last Updated 29 ಡಿಸೆಂಬರ್ 2023, 5:28 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ ಜಿಲ್ಲೆ): ತಾಲ್ಲೂಕಿನ ಶಿಶುವಿನಹಾಳ ಗ್ರಾಮದ ಗಂಗವ್ವ ನೀಲಪ್ಪ ಹರಿಜನ ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದ ಕನ್ನಡತಿಯಾಗಿದ್ದಾರೆ.

ಇಂಗ್ಲೆಂಡ್‌ನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ಪರ ಆಟವಾಡಿದ ಗಂಗವ್ವ ಆಸ್ಟ್ರೇಲಿಯಾ ವಿರುದ್ಧ 60 ಎಸೆತ ಎದುರಿಸಿ 117 ರನ್ ಹೊಡೆದು ದಾಖಲೆ ಬರೆದರು.

ಭಾರತಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಬಾಲ್ಯದಿಂದ ಕ್ರೀಡಾಪಟು ಆಗಬೇಕು, ಸಾಧನೆ ಮಾಡಬೇಕು ಎಂಬ ಕನಸು ಗಂಗವ್ವ ಅವರದ್ದು.

‘ಸಹೋದರ, ಸಹೋದರಿಯ ಜೊತೆ ತಾಯಿಯ ಆಸರೆಯಲ್ಲಿ ಬೆಳೆದೆ. ಸಣ್ಣವಳಿದ್ದಾಗ ಸುಣ್ಣ ಬಿದ್ದು, ಒಂದು ಕಣ್ಣು ಸಂಪೂರ್ಣ ಹಾನಿಯಾಯಿತು. ನನ್ನ ತಾಯಿ ಮನೆಗೆಲಸ ಮಾಡುತ್ತಾರೆ. 4ನೇ ತರಗತಿಯವರೆಗೆ ಹುಟ್ಟೂರು ಶಿಶುವಿನಹಾಳದಲ್ಲಿ ಓದಿದೆ. ನಂತರ ಹಾವೇರಿಯ ಅಂಗವಿಕಲರ ಕ್ರೀಡಾ ಶಾಲೆಯಲ್ಲಿ ಓದು, ಪಿಯುಸಿ, ರಾಣೆಬೆನ್ನೂರಲ್ಲಿ ಸ್ನೇಹ ದೀಪಾ ಸಂಸ್ಥೆಯಿಂದ ಕ್ರಿಕೆಟ್ ತರಬೇತಿ ಪಡೆದೆ’ ಎಂದು ಗಂಗವ್ವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಗೇಶ ಭವಾನಿ ಶಂಕರ ಮತ್ತು ಶಿವಾಜಿ ಅವರು ನಿತ್ಯ ಕ್ರಿಕೆಟ್ ತರಬೇತಿ ನೀಡಿದರು. ಕನಸು ಈಡೇರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಅಂಧತ್ವ ದೇಹಕ್ಕೆ ಹೊರತು ಮನಸ್ಸಿಗಲ್ಲ. ನಾನೂ ಸಹ ಸಾಧಿಸಬಹುದು ಎಂಬ ಆಯೋಚನೆಯಲ್ಲೇ ಕ್ರಿಕಿಟ್‌ ಟೂರ್ನಿಗೆ ಹೆಸರು ನೋಂದಾಯಿಸಿದೆ’ ಎಂದರು.

‘ಬೆಂಗಳೂರಿನ ಸಮರ್ಥನಂ ಸಂಸ್ಥೆ ಸೇರಿ ತರಬೇತಿ ಆರಂಭಿಸಿದೆ. ನನ್ನಾಸೆಗೆ ಬೆಂಗಾವಲಾಗಿ ನಿಂತು ಸಂಸ್ಥೆ ಪ್ರೋತ್ಸಾಹಿಸಿತು. ರಾಜ್ಯಮಟ್ಟದಲ್ಲಿ ಉತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದೆ’ ಎಂದರು.

ರಾಷ್ಟ್ರೀಯ ಮಟ್ಟದ ಟೂರ್ನಿಯ ಆಯ್ಕೆ ಪ್ರಕ್ರಿಯೆಯಲ್ಲಿ 50 ಕ್ರೀಡಾಪಟುಗಳು ಭಾಗವಹಿಸಿದ್ದರು. ಅದರಲ್ಲಿ ಗಂಗವ್ವ ಆಯ್ಕೆಯಾಗಿದ್ದರು.

ಗಂಗವ್ವ ನೀಲಪ್ಪ ಹರಿಜನ
ಗಂಗವ್ವ ನೀಲಪ್ಪ ಹರಿಜನ
ಗಂಗವ್ವ ನೀಲಪ್ಪ ಹರಿಜನ
ಗಂಗವ್ವ ನೀಲಪ್ಪ ಹರಿಜನ

Quote - ಕಣ್ಣು ಕಾಲು ಕೈ ಅಂಗಾಂಗಳನ್ನು ಕಳೆದುಕೊಂಡಿದ್ದರೂ ಹಿಂಜರಿಯಬೇಡಿ. ಪ್ರಪಂಚ ಸಾಕಷ್ಟು ವಿಸ್ತಾರವಾಗಿದೆ. ಸಾಧನೆಯ ಹಂಬಲ ಛಲ ಇದ್ದರೆ ಸಮಸ್ಯೆ ಸವಾಲುಗಳನ್ನು ಎದುರಿಸಬಹುದು. –ಗಂಗವ್ವ ಕ್ರಿಕೆಟ್ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT