ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನ, ಅಕ್ಷರ ನೀಡಿದ ಮಹಾತ್ಮ ಶಿವಕುಮಾರ ಸ್ವಾಮೀಜಿ: ಸದಾಶಿವ ಸ್ವಾಮೀಜಿ ಬಣ್ಣನೆ

Last Updated 31 ಜನವರಿ 2019, 12:57 IST
ಅಕ್ಷರ ಗಾತ್ರ

ಹಾವೇರಿ:‘ಮಠಗಳಿಗೆ ಅನ್ನ ಮತ್ತು ಅಕ್ಷರ ದಾಸೋಹದ ಸಾಮರ್ಥ್ಯವನ್ನು ಪರಿಚಯಿಸಿದ ಮಹಾತ್ಮ ಲಿಂ. ಶಿವಕುಮಾರ ಸ್ವಾಮೀಜಿ. ಅವರ ಆದರ್ಶಗಳನ್ನು ಪಾಲಿಸಿ ಸಮಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಸಿದ್ದದೇವ ಪುರದ ಓಣಿಯಲ್ಲಿ ಗುರುವಾರ ನಡೆದ ಲಿಂ. ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮೀಜಿ 11 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಅವರ ಆತ್ಮಶಕ್ತಿ ಕುಂದಿರಲಿಲ್ಲ. ಅವರು ಆಸ್ಪತ್ರೆಯಲ್ಲಿ ಇರುವಾಗಲೂ ವಿಭೂತಿ, ವಚನಗಳನ್ನು ಇಷ್ಟಪಡುತ್ತಿದ್ದರು. ಒಂದು ಕೈಯಲ್ಲಿ ಲಿಂಗ ಹಾಗೂ ಇನ್ನೊಂದು ಕೈಯಲ್ಲಿ ಸಮಾಜವನ್ನು ಪೂಜಿಸುತ್ತಿದ್ದರು. ಸಮಾಜವನ್ನು ಸಮಾನವಾಗಿ ಕಾಣುತ್ತಿದ್ದರು ಎಂದರು.

ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ಶಿಕ್ಷಣ ವಂಚಿತ ಮಕ್ಕಳನ್ನು ಮಠಕ್ಕೆ ಕರೆತಂದು ಜ್ಞಾನ ಮತ್ತು ದಾಸೋಹವನ್ನು ನೀಡಿದವರು. ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಮರಣೋತ್ತರವಾಗಿ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ದದೇವ ಪುರದ ಓಣಿಯ ನಿವಾಸಿಗಳಿಂದ ಅನ್ನ ದಾಸೋಹ ನಡೆಯಿತು. ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ಬಸವರಾಜ ಎಚ್‌., ಶಿವಾನಂದ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT