ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನ ಬೆಳೆ ವೀಕ್ಷಿಸಿದ ಕೀಟ ತಜ್ಞರು

Last Updated 3 ಜೂನ್ 2020, 17:20 IST
ಅಕ್ಷರ ಗಾತ್ರ

ಹಾವೇರಿ:ತಾಲ್ಲೂಕಿನ ಅಕ್ಕೂರು ಗ್ರಾಮದ ಸುತ್ತಮುತ್ತಲಿನ ಹೊಲದಲ್ಲಿ ಮೆಣಸಿನಕಾಯಿ ಬೆಳೆ ಸರಿಯಾಗಿ ಬಂದಿಲ್ಲ ಎಂದು ರೈತರು ತೋಟಗಾರಿಕೆ ಇಲಾಖೆಗೆ ದೂರು ನೀಡಿದ್ದರು.

ಈ ಸಂಬಂಧ, ತೋಟಗಾರಿಕೆ ಸಹಾಯಕ ನಿರ್ದೇಶಕ ಬಸವರಾಜ ಬರಿಗಾರ, ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟ ತಜ್ಞರ ತಂಡ ಬುಧವಾರ ಕೃಷಿ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ಯಂಕನಗೌಡ ಮರಿಗೌಡ್ರ ಸೇರಿದಂತೆ ಮೂವರು ರೈತರ ಜಮೀನುಗಳಿಗೆ ಭೇಟಿ ನೀಡಿದ್ದು, ಎಲ್ಲ ಬೆಳೆಗಳು ಒಂದೇ ರೀತಿ ಕಂಡುಬಂದಿವೆ. ‘ಫಸಲು ಸಮರ್ಪಕವಾಗಿಲ್ಲ, ಮೆಣಿಸಿನಕಾಯಿ ಇಳುವರಿ ಕಡಿಮೆಯಾಗಿದೆ’ ಎಂದು ರೈತರು ದೂರಿದ್ದಾರೆ. ಒಂದೆರಡು ಗಿಡಗಳನ್ನು ಸಂಶೋಧನಾ ಕೇಂದ್ರಕ್ಕೆ ಕೀಟತಜ್ಞರುತೆಗೆದುಕೊಂಡು ಹೋಗಿದ್ದು, ಅವರು ವರದಿ ಕೊಟ್ಟ ನಂತರ ಕೀಟಬಾಧೆ ಮತ್ತು ವೈರಸ್‌ ಬಾಧೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ರೈತರಿಗೆ ನಷ್ಟ ಉಂಟಾಗಿದ್ದರೆ ಖಾಸಗಿ ಕಂಪನಿಯಿಂದ ಪರಿಹಾರ ಕೊಡಿಸಲಾಗುವುದು’ ಎಂದು ಬಸವರಾಜ ಬರಿಗಾರ ಹೇಳಿದರು.

ಗ್ರಾಮದ ರೈತರೆಲ್ಲರೂ ಕಂಪನಿಯ ರಸೀತಿ, ಆಧಾರ ಕಾರ್ಡ್, ಉತಾರವನ್ನು ತೋಟಗಾರಿಕಾ ಇಲಾಖೆಗೆ ತನ್ನಿ ಎಂದು ಅಧಿಕಾರಿಗಳು ತಿಳಿಸಿದರು. ಯಂಕನಗೌಡ ಮರಿಗೌಡ್ರ, ಹನುಮಂತಗೌಡ ಪಾಟೀಲ, ಪರಸನಗೌಡ ಮರಿಗೌಡ್ರ, ವೀರಭದ್ರಗೌಡ ಪಾಟೀಲ್ ಸುಭಾಸ ಹೊಸಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT