ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು| ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಹಿರಿದು: ಶಾಸಕ ಯು.ಬಿ.ಬಣಕಾರ

Published 9 ಜುಲೈ 2023, 7:58 IST
Last Updated 9 ಜುಲೈ 2023, 7:58 IST
ಅಕ್ಷರ ಗಾತ್ರ

ಹಿರೇಕೆರೂರು: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಶಿಷ್ಯನ ಸಾಧನೆಯಲ್ಲಿ ಸಂತಸ ಕಾಣುವ ಗುರುಗಳ ಸೇವೆ ಸ್ಮರಣೀಯವಾದುದು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ಪಟ್ಟಣದ ನೌಕರರ ಭವನದಲ್ಲಿ ಸಾತೇನಹಳ್ಳಿ ಗ್ರಾಮದ ಕರಡೇರ ಪ್ರತಿಷ್ಠಾನ, ಕೆ.ಎನ್.ಗ್ರೂಪ್ ಬೆಂಗಳೂರು ವತಿಯಿಂದ ಕೊಡಮಾಡುವ ವಿದ್ಯಾಭೂಷಣ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ, ಉತ್ತಮ ನಾಗರಿಕನ್ನಾಗಿಸಿ ಸಧೃಡ ಸಮಾಜ ನಿರ್ಮಾಣ ಮಾಡುವ ಮಹತ್ತರವಾದ ಜವಬ್ದಾರಿ ಶಿಕ್ಷಕರ ಮೇಲಿದ್ದು, ಶಿಕ್ಷಕರು ಮಕ್ಕಳಲ್ಲಿರುವ ತಪ್ಪುಗಳನ್ನು ತಿದ್ದಿ ಅವರಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಈಶ್ವರಪ್ಪ ಕರಡೇರ ಪ್ರತಿಷ್ಠಾನದಿಂದ ಸಮಾಜಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಬ್ಯಾಡಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾದೇವ ಕರಿಯಣ್ಣನವರ, ಸಾಹಿತಿ ಜೀವರಾಜ್ ಛತ್ರದ, ಕರಡೇರ ಪ್ರತಿಷ್ಠಾನ ಗೌರವ ಕಾರ್ಯದರ್ಶಿ, ಶಿಕ್ಷಕ ಸುರೇಶ ಕರಡೇರ ಮಾತನಾಡಿದರು.

ಶಿಕ್ಷಕರಾದ ಎನ್.ಸುರೇಶ ಕುಮಾರ,ಇಂದಿರಾ ಕಂಗೂರಿ,ಅಶ್ವೀನಿ ಬಿದರಿ,ಎಚ್.ಡಿ.ಹಂಸಭಾವಿ, ಸಿ.ಬಿ.ಪಾಟೀಲ, ಬಸವರಾಜ ಕೊಳ್ಳಿ, ಎಸ್.ಎಫ್. ಜಂಗ್ಲೇಪ್ಪನವರ,ಮಂಜಪ್ಪ ಯಾಲಕ್ಕಿ,ಗುರುರಾಜ ಚಂದ್ರಕೇರ ಅವರಿಗೆ ವಿದ್ಯಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೋಮು ಕರಡೇರ ಅಧ್ಯಕ್ಷತೆ ವಹಿಸಿದ್ದರು, ಎಂ.ಬಿ.ಕಾಗಿನಲ್ಲಿ, ಯು.ಬಿ.ಕೊನಪ್ಪನವರ, ಎಚ್.ವಿ.ಬೆಟ್ಬಳ್ಳೇರ, ಭೀಮನಗೌಡ ಪಾಟೀಲ, ಸಿದ್ದರಾಮೇಶ್ವರ ಅಜಗೊಂಡ್ರ, ಜಗದೀಶ ಅಮ್ರಧ ಮಮತಾ ಕರಡೇರ,ಕವನಾ ಕರಡೇರ ಅಶೋಕ ಯಲಿವಾಳ ಪ್ರಭು ಕರಡೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT