ಶನಿವಾರ, ನವೆಂಬರ್ 28, 2020
18 °C

ಹೊಲಗಳಿಗೆ ಹೋಗುವ ದಾರಿ ಸುಗಮಗೊಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ತಾಲ್ಲೂಕಿನ ಕಲ್ಯಾಣ ಗ್ರಾಮದ ರೈತರ ಹೊಲಗಳಿಗೆ ಹೋಗುವ ದಾರಿ ಸುಗಮಗೊಳಿಸಬೇಕು ಎಂದು ಆಗ್ರಹಿಸಿ ರೈತರು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕಲ್ಯಾಣ ಗ್ರಾಮದ ರೈತರಾದ ಚನ್ನಪ್ಪ ಕೋರಿ, ದ್ಯಾಮಣ್ಣ ಕೋರಿ, ಬಸಪ್ಪ ಕೋರಿ, ರಾಮಣ್ಣ ಹೊಸಕಟ್ಟಿ, ಯಲ್ಲಪ್ಪ ಹೊಸಕಟ್ಟಿ, ಶೇಖಣ್ಣ ಹೊಸಕಟ್ಟಿ, ಬಸವಣ್ಣೆಪ್ಪ ರಾಮಾಪುರ, ಬಸವಣ್ಣೆಪ್ಪ ಬರದೂರ ಸೇರಿ ಅನೇಕ ರೈತರ ಹೊಲಗಳಿಗೆ ಹೊಗಲು ದಾರಿ ಇಲ್ಲದಂತಾಗಿದೆ. ಅದೇ ಗ್ರಾಮದ ರೈತ ಮಹದೇವಪ್ಪ ಕುಂದಗೋಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅದರಿಂದ ಗ್ರಾಮದ ಅನೇಕ ರೈತರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಭೂಮಾಪಕ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಿರಿ. ಆದರೆ ಈವರೆಗೆ ಯಾವುದೇ ಕಾರ್ಯಗಳು ನಡೆದಿಲ್ಲ. ನಿತ್ಯ ಹೊಲಗಳಿಗೆ ಹೋಗಲು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಹಶೀಲ್ದಾರ್ ಪ್ರಕಾಶ ಕುದರಿ ಸ್ಥಳಕ್ಕೆ ಭೇಟಿ ನೀಡಿ, ‘ಈಗ ಹೊಲದಲ್ಲಿ ಬೆಳೆಗಳಿದ್ದು, ತಕ್ಷಣ ದಾರಿ ನಿರ್ಮಾಣ ಮಾಡುವುದು ಬೇಡ. ಸ್ವಲ್ಪ ಕಾಲಾವಕಾಶ ನೀಡಿದರೆ ಹೊಲಗಳಿಗೆ ಹೋಗುವ ದಾರಿ ಸುಗಮಗೊಳಿಸುತ್ತೇವೆ’ ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಕಲ್ಯಾಣ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.