ಹಾವೇರಿ: 14 ಸಖಿ, 2ಆಧುನಿಕ ಮತಗಟ್ಟೆಗಳು; 17.02 ಲಕ್ಷ ಮತದಾರರು

ಶುಕ್ರವಾರ, ಏಪ್ರಿಲ್ 26, 2019
28 °C
ಅಂಗವಿಕಲರಿಗೆ ವಿಶೇಷ ವ್ಯವಸ್ಥೆ, ಅಶಕ್ತರಿಗೂ ನೆರವು

ಹಾವೇರಿ: 14 ಸಖಿ, 2ಆಧುನಿಕ ಮತಗಟ್ಟೆಗಳು; 17.02 ಲಕ್ಷ ಮತದಾರರು

Published:
Updated:
Prajavani

ಹಾವೇರಿ: ಜಿಲ್ಲೆಯ 5 ಹಾಗೂ ಗದಗದ 3 ವಿಧಾನಸಭಾ ಕ್ಷೇತ್ರಗಳು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 32,943 ಸಾವಿರ ಯುವ , 21,584 ಅಂಗವಿಕಲ, 71 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 17,02,618 ಮತದಾರರಿದ್ದು, 1972 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಲಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 387 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲೂ ಮೂಲ ಸೌಕರ್ಯ ಕಲ್ಪಿಸಲಾಗುವುದು. ಮತದಾನ ಸ್ನೇಹಿ ವಾತಾವರಣ ನಿರ್ಮಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.

ಸಿಬ್ಬಂದಿ ವಿವರ:
ಮತದಾನ ಪ್ರಕ್ರಿಯೆಗೆ 7,644 ಮತಗಟ್ಟೆ ಸಿಬ್ಬಂದಿ, 574 ಮೈಕ್ರೋ ಅಬ್ಸರ್‌ವರ್ ಗುರುತಿಸಲಾಗಿದೆ. ನಿಯೋಜಿತ ಸಿಬ್ಬಂದಿಗೆ ಅಂಚೆ ಮತಪತ್ರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ದೂರುಗಳು:
ಚುನಾವಣಾ ದೂರು ಸ್ವೀಕರಿಸಲು ಸಹಾಯವಾಣಿ 1950 ಸ್ಥಾಪಿಸಲಾಗಿದೆ. ಈವರೆಗೆ 360 ದೂರುಗಳು ಬಂದಿದ್ದು, ವಿಲೇವಾರಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದ 23, ಪೊಲೀಸ್ ಇಲಾಖೆಯಿಂದ 10, ಅಬಕಾರಿ ಇಲಾಖೆಯು 127 ದೂರುಗಳನ್ನು ದಾಖಲಿಸಿದೆ ಎಂದು ವಿವರಿಸಿದರು.

ಬ್ಯಾಂಕ್ ವಹಿವಾಟು:
ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿ  ₹1 ಲಕ್ಷದ 1,854 ವ್ಯವಹಾರಗಳು ನಡೆದಿವೆ. ₹10 ಲಕ್ಷಕ್ಕಿಂತ ಹೆಚ್ಚು 41 ವಹಿವಾಟು ನಡೆದಿವೆ. ಯಾವುದೇ ಸಂಶಯಾಸ್ಪದ ಹಣಕಾಸಿನ ವರ್ಗಾವಣೆ ನಡೆದಿಲ್ಲ ಎಂದು ವಿವರಿಸಿದರು.

ಕಿರು ಹೊತ್ತಿಗೆ ಬಿಡುಗಡೆ:
ಲೋಕಸಭಾ ಚುನಾವಣೆಯ ಮಾಹಿತಿ, ಸಂಪರ್ಕ ಸಂಖ್ಯೆ ಹಾಗೂ ಚುನಾವಣೆ ಹಿನ್ನೋಟದ ಮಾಹಿತಿ ಒಳಗೊಂಡ ಮಾಧ್ಯಮ ಕೈಪಿಡಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿದ್ದು, ಕೃಷ್ಣ ಬಾಜಪೇಯಿ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಲೀಲಾವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಶೇಖರ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !