ಹಾವೇರಿ: ಏಲಕ್ಕಿ ಕಂಪಿನ ನಾಡಿನ ನೆಲದ ಹೆಮ್ಮೆಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ. ಗೋಕಾಕರ 112ನೇ ಜನ್ಮ ದಿನವನ್ನು ಇಲ್ಲಿಯ ಗುರುಭವನದ ಎದುರು ಇರುವ ಗೋಕಾಕರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಹಿತ್ಯಾಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಹಿರಿಯ ಸಾಮಾಜಿಕ ಕಾರ್ಯಕರ್ತ ವಿವೇಕಾನಂದ ಬೆಂಡಿಗೇರಿ ಮಾತನಾಡಿ, ಗೋಕಾಕ ಅವರು ಕನ್ನಡ ನಾಡಿನ ದೈವಶಕ್ತಿ. ಗೋಕಾಕ ವರದಿಯ ಮೂಲಕ ನಾಡು ನುಡಿಗೆ ಹೊಸ ಶಕ್ತಿಯನ್ನು ತುಂಬಿದವರು ಎಂದು ಗುಣಗಾನ ಮಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ವಿರೂಪಾಕ್ಷ ಹಾವನೂರ, ಪ್ರೊ.ಪಿ.ಸಿ.ಹಿರೇಮಠ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಮೈಲಾರ ಮಹಾದೇವ ಟ್ರಸ್ಟ್‌ನ ವಿ.ಎನ್. ತಿಪ್ಪನಗೌಡ, ಗೋಕಾಕ್ ಟ್ರಸ್ಟ್ ಹಿರಿಯ ಸದಸ್ಯ ಸತೀಶ ಕುಲಕರ್ಣಿ, ಜೆ.ಸಿ. ಕ್ಲಬ್‌ನ ಮುರಗೇಶ ಹುಂಬಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ವೈ. ಗುಬ್ಬಣ್ಣನವರ, ಸಾಹಿತಿ ಕಲಾ ಬಳಗದ ಪೃಥ್ವಿರಾಜ ಬೆಟಗೇರಿ, ರಾಜೇಶ್ವರಿ ರವಿ ಸಾರಂಗಮಠ, ಡಾ.ಅಂಬಿಕಾ ಹಂಚಾಟೆ, ಮೈಲಾರ ಮಹಾದೇವರ ಸೋದರ ಸಂಬಂಧಿ ಪರಮೇಶ್ವರಪ್ಪ ಮೈಲಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.