ಹಾವೇರಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಸಿಇಒ, ಎಡಿಸಿ

7

ಹಾವೇರಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಸಿಇಒ, ಎಡಿಸಿ

Published:
Updated:
Deccan Herald

ಹಾವೇರಿ: ಹಾನಗಲ್ ತಾಲ್ಲೂಕಿನ ಆಡೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಸ್ವಚ್ಛತಾ ಮಾಸಾಚರಣೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಶೌಚಾಲಯವನ್ನು ಸ್ವಚ್ಛಗೊಳಿಸಿದರು.

ನೈರ್ಮಲ್ಯ ಮತ್ತು ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯಲ್ಲಿ ಅಕ್ಟೋಬರ್ 2ರ ತನಕ ‘ಹಾವೇರಿ ಸ್ವಚ್ಛತಾ ಮಾಸಾಚರಣೆ’ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಆಡೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲಾ ಶೌಚಾಲಯಕ್ಕೆ ತೆರಳಿದ ಸಿಇಒ ಹಾಗೂ ಎಡಿಸಿ, ಫಿನಾಯಿಲ್ ಹಾಕಿ ಬ್ರಶ್‌ ಮೂಲಕ ಸ್ವಚ್ಚ ಮಾಡಿದರು. ಆ ಬಳಿಕ, ಪೈಪ್‌ ಮೂಲಕ ನೀರು ಹಿಡಿದರು.

ಅಲ್ಲದೇ, ಇತರ ಸಿಬ್ಬಂದಿ ಜೊತೆ ಸೇರಿಕೊಂಡು ಶಾಲಾ ಆವರಣದಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು. ಬಳಿಕ ಸಸಿಗಳನ್ನು ನಾಟಿ ಮಾಡಿದರು. ಸ್ಥಳೀಯರಿಗೆ ಸ್ವಚ್ಛತೆ ಹಾಗೂ ಶೌಚಾಲಯ ಬಳಕೆಯ ಬಗ್ಗೆ ತಿಳಿ ಹೇಳಿದರು.

‘ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರು ವಿಶ್ವಕ್ಕೇ ಪ್ರೇರಣೆಯಾಗಿದ್ದಾರೆ. ಅವರು, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಈ ಆದರ್ಶವು ಇಂದಿನ ಅಗತ್ಯವಾಗಿದೆ’ ಎಂದು ಸಿಇಒ ಸಿ.ಟಿ. ಶಿಲ್ಪಾನಾಗ್ ಪ್ರತಿಕ್ರಿಯಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !