ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಪಾಲಿಸುವುದೇ ನೈಜ ಗೌರವ

Last Updated 3 ಅಕ್ಟೋಬರ್ 2012, 5:45 IST
ಅಕ್ಷರ ಗಾತ್ರ

ಹಾವೇರಿ: `ಮಹಾತ್ಮರ ಪುತ್ಥಳಿ ಅನಾವರಣ ಮಾಡುವುದಷ್ಟೇ ಅವರಿಗೆ ಸಲ್ಲಿಸುವ ಗೌರವವಲ್ಲ. ಅವರ ತತ್ವಾ ದರ್ಶಗಳು ಜನಮಾನಸದಿಂದ ಮರೆತು ಹೋಗದಂತೆ ನೋಡಿಕೊಳ್ಳುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ~ ಎಂದು ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಹೇಳಿದರು.

ನಗರದ ಕೆಇಬಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಅವರ ಪುತ್ಥಳಿ ಅನಾವರಣಗೊಳಿಸಿದ ನಂತರದ ಕೆಇಬಿ ಸಭಾಭವನದಲ್ಲಿ ನಡೆದ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಪ್ರಸ್ತತ ದಿನಗಳಲ್ಲಿ ಕೇವಲ ಪುತ್ಥಳಿ ಅನಾವರಣಕ್ಕೆ ಹೆಚ್ಚಿನ ಒತ್ತು ನೀಡಲಾ ಗುತ್ತಿದೆ ಹೊರತೂ ಅವರ ವಿಚಾರ ಗಳನ್ನು ತಿಳಿಸಿಕೊಡುವ ಕೆಲಸವಾ ಗುತ್ತಿಲ್ಲ. ಹೀಗಾಗಿ ಇಂದಿನ ಪೀಳಿಗೆ ಇತಿಹಾಸದಿಂದ ದೂರ ಸರಿಯುತ್ತಿದೆ. ಇದು ಹೀಗೆಯೇ ಮುಂದುವರೆ. ಭವಿಷ್ಯದಲ್ಲಿ ರಾಷ್ಟ್ರಾಭಿಮಾನಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದರು.

ನಮ್ಮ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿರುವುದು ಆದರ್ಶದ ಜೀವ ನವೇ ಹೊರತೂ ಅನುಕರಣೀಯ ಜೀವನವಲ್ಲ. ಆದರ್ಶದಿಂದ ವಿಮುಖ ರಾಗಿ ಜನರು ಅನುಕರಣೆಗೆ ಮಾರು ಹೋಗುವ ಮೂಲಕ ತಮ್ಮ ಜೀವನ ವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಂಗೂರ ಕರಿಯಪ್ಪ ಅವರು ಅಪ್ರತಿಮ ದೇಶಭಕ್ತರಾಗಿದ್ದರಲ್ಲದೇ, ಮಹಾತ್ಮಾಗಾಂಧಿ ಅವರ ಅಪ್ಪಟ ಅನುಯಾಯಿಗಳಾಗಿದ್ದರು. ಗಾಂಧೀಜಿ ಅವರ ಮಾತಿಗೆ ಮನ್ನಣೆ ನೀಡಿ ಜಾತಿ, ಧರ್ಮ ಲೆಕ್ಕಿಸದೇ ದಲಿತ ಮಹಿಳೆಯನ್ನು ಮದುವೆ ಮಾಡಿಕೊಳ್ಳುವ ಮೂಲಕ ಕನಕದಾಸರ ತತ್ವಗಳನ್ನು ಜೀವನದಲ್ಲಿ ಅಕ್ಷರಶಃ ಆಚರಣೆಗೆ ತಂದಿದ್ದರು. ಇಂತಹ ಆದರ್ಶ ವ್ಯಕ್ತಿಗಳ ಜೀವನ ನಮಗೆ ಆದರ್ಶವಾಗಬೇಕಿದೆ. ಆದರೆ, ಇಂದಿನ ಜನರು ಧಾರಾ ವಾಹಿಗಳ ಪಾತ್ರಗಳನ್ನು ಆದರ್ಶ ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ ಎಂದರು.

ಸಂಗೂರ ಕರಿಯಪ್ಪ ಪುತ್ಥಳಿ ಅನಾವರಣಗೊಳಿಸಿದ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಎಂ.ಉದಾಸಿ ಮಾತ ನಾಡಿ, ಸ್ವಾತಂತ್ರ್ಯಯೋಧರು ತಮ್ಮ ತ್ಯಾಗ ಬಲಿದಾನಗಳಿಂದ ದೊರಕಿಸಿ ಕೊಟ್ಟ ಸ್ವಾತಂತ್ರ್ಯ ಸ್ವೇಚ್ಛಾಚಾರ ವಾಗುತ್ತಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದರು.
ಸಂಗೂರ ಕರಿಯಪ್ಪ ಅವರು ಎಂತಹದೇ ಕಷ್ಟಗಳು ಬಂದಾಗಲೂ ರಾಜೀಮಾಡಿಕೊಳ್ಳದೇ ತಮ್ಮ ಗುರಿ ತಲುಪುವತ್ತ ದೃಡವಾದ ಹೋರಾಟ ನಡೆಸಿದರು.

ಅಂತವರ ಆದರ್ಶಗಳನ್ನು ಇಂದಿನ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಹೇಳಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಪಾಶ್ಚಿಮಾತ್ಯರಲ್ಲಿ ಕಾಣ ಸಿಗುವ ರಾಷ್ಟ್ರೀಯತೆ ನಮ್ಮ ದೇಶದಲ್ಲಿ ಸಿಗುತ್ತಿಲ್ಲ. ಇದಕ್ಕೆ ಜನರಲ್ಲಿರುವ ಸ್ವಾರ್ಥಮನೋಭಾವ ಹಾಗೂ ಸ್ವತಂತ್ರ ಯೋಚನೆ ಇಲ್ಲದಿರುವುದೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರೂ ಓಲೇಕಾರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸದಿದ್ದರೇ ಯಾವುದೇ ವ್ಯಕ್ತಿ ಎಂತಹದೇ ಹುದ್ದೆ ಯಲ್ಲಿದ್ದರೂ ಅದು ನಿಷ್ಪ್ರಯೋಜಕ ವಾಗಲಿದೆ ಎಂದ ಅವರು, ತಾವು ಶಾಸಕರಾದ ನಂತರ ನಗರದಲ್ಲಿ ವಿ.ಕೃ.ಗೋಕಾಕ್, ಅಕ್ಕಮಹಾದೇವಿ, ಸಂಗೂರ ಕರಿಯಪ್ಪ ಅವರ ಪುತ್ಥಳಿ ಸ್ಥಾಪನೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಅಶ್ವಾರೂಢ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾ ಗುವುದು ಎಂದರು.

ಸಮಾರಂಭದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷ ರಾದ ಕೊಟ್ರೇಶಪ್ಪ ಬಸೇಗಣ್ಣಿ, ಪರಮೇಶ್ವರಪ್ಪ ಮೇಗಳಮನಿ, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕೋರಿಶೆಟ್ಟರ, ಜಿ.ಪಂ. ಸದಸ್ಯರಾದ ಶಂಕ್ರಣ್ಣ ಮಾತನವರ, ವಿರೂಪಾಕ್ಷಪ್ಪ ಬಳ್ಳಾರಿ, ರಾಜೇಂದ್ರ ಹಾವೇರಣ್ಣ ನವರ, ಎಂ.ಎ.ಗಾಜೀಗೌಡ್ರ,ಆರ್.ಎಸ್. ಮಹಾರಾಜಪೇಟ, ನೆಗಳೂರಿನ ಹರಕಂಗಿ, ಕರ್ಪೂರಮಠ, ಸಂಗೂರ ಕರಿಯಪ್ಪ ಕುಟುಂಬದ ಸದಸ್ಯರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT