ಹಿರೇಕೆರೂರ: ಹಿರೇಕೆರೂರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರೊಬ್ಬರ ವರ್ಗಾವಣೆಯನ್ನು ರದ್ದುಪಡಿ ಸಲು ಒತ್ತಾಯಿಸಿ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ಭೂಗೋಳಶಾಸ್ತ್ರ ಉಪನ್ಯಾಸಕ ಎಂ. ವೈ.ಜಟ್ಟೆಣ್ಣನವರ ಅವರನ್ನು ವರ್ಗಾವಣೆ ಮಾಡಲಾಗಿದೆ. ಉತ್ತಮ ವಾಗಿ ಉಪನ್ಯಾಸ ಮಾಡುವ ಅವರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ವಾಗಿದೆ. ಕಾರಣ ಅವರ ವರ್ಗಾವಣೆ ರದ್ದುಪಡಿಸಿ ಇಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಉಪತಹ ಸೀಲ್ದಾರ ತುಷಾರ ಹೊಸೂರ ಮನವಿ ಸ್ವೀಕರಿಸಿ, ಎಂ.ವೈ.ಜಟ್ಟೆಣ್ಣನವರ ಅವರನ್ನು ಸದ್ಯ ಬಿಡುಗಡೆಗೊಳಿಸದಂತೆ ಪ್ರಾಚಾರ್ಯರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಎಬಿವಿಪಿ ಮುಖಂಡ ದೇವರಾಜ ಹಂಚಿನಮನಿ, ವಿದ್ಯಾರ್ಥಿಗಳಾದ ಅನಿಲ ಹಲ ವಾಗಿಲ, ಪ್ರವೀಣ ಕುರುವತ್ತೇರ, ಅಜಯ ಕಲ್ಯಾಣಿ, ಕಿರಣ ಭಜಂತ್ರಿ, ಪ್ರಕಾಶ ಅರಳೀಕಟ್ಟಿ, ಸ್ಮಿತಾ ಪಾಟೀಲ, ಗೀತಾ ಮಾಯಾಚಾರಿ, ಶ್ರೀದೇವಿ ಗೊರವರ, ರೂಪಾ ಜೋಗಿಹಳ್ಳಿ, ಅಶ್ವಿನಿ ಹಿರೇಮಠ, ರಂಜಿತಾ ಕಲಾಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.