ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದರಲ್ಲಿ ಅನುಭವ ಹೆಚ್ಚು

ಬುಡಕಟ್ಟು ಕಲೆಗಳ ಪ್ರದರ್ಶನ, ವಿಚಾರ ಸಂಕಿರಣದಲ್ಲಿ ಬೊಮ್ಮಾಯಿ ಅಭಿಮತ
Last Updated 9 ಮಾರ್ಚ್ 2017, 11:07 IST
ಅಕ್ಷರ ಗಾತ್ರ
ಶಿಗ್ಗಾವಿ: ಜನಪದರ ಬದುಕಿನಲ್ಲಿ ಅಭಿನಯಕ್ಕಿಂತ ಅನುಭವ ಹೆಚ್ಚಿಗಿದ್ದು, ಅದರಲ್ಲಿ  ತಮ್ಮ ಜೀವನವನ್ನು ಸಾರ್ಥಕ ಗೊಳಿಸಿಕೊಂಡು ಸಮಾಜಕ್ಕೆ ವಿಶೇಷ ಸಂದೇಶ ನೀಡುವ ಕಾಯಕ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಶಾಸಕರ ಬಸವರಾಜ ಬೊಮ್ಮಯಿಹೇಳಿದರು.
 
ತಾಲ್ಲೂಕಿನ ಗೊಟಗೋಡಿಯಲ್ಲಿ ಇರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರ ಹಾಗೂ ಕನ್ನಡ ಜಾನಪದ ಪರಿಷತ್ತು, ಹಾವೇರಿ ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ’ಬುಡಕಟ್ಟು ಕಲೆಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣ‘ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ವ್ಯವಸ್ಥೆಯಲ್ಲಿ ಬದಲಾವಣೆಯಾದರೆ ಅದನ್ನು ಕ್ರಾಂತಿ ಎಂದು ಕರೆಯ ಲಾಗುತ್ತದೆ. ಆ ಕ್ರಾಂತಿಗೆ ಏಕಾಗ್ರತೆ ಮುಖ್ಯವಾದ ಅಂಶ. ಆಗ ಮಾತ್ರ ವ್ಯಕ್ತಿಯ ಸಾಧನೆಗಳು ಗುರುತಿಸಲು ಸಾಧ್ಯ. ಈ ಬಗೆಯ ಏಕಾಗ್ರತೆಯನ್ನು ವಿಭಿನ್ನ ಆಲೋಚನೆಗಳ ಮೂಲಕ ಬುಡಕಟ್ಟು ಸಮುದಾಯಗಳು ಹೊಂದಿವೆ ಎಂದರು.
 
ಪ್ರಭಾರ ಕುಲಪತಿ ಪ್ರೊ.ಡಿ.ಬಿ. ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಶಿಷ್ಟ ಜ್ಞಾನಕ್ಕೂ ತಾಯಿ ಬೇರು ಜಾನಪದ ಜ್ಞಾನ. ಭಾರತದಲ್ಲಿ ಅತಿ ಹೆಚ್ಚು ಜನಪದ ಮಹಾಕಾವ್ಯಗಳನ್ನು ಹೊಂದಿರುವ ರಾಜ್ಯ ನಮ್ಮದಾಗಿದೆ. 
 
ಇಂತಹ ಜನಪದ ಜ್ಞಾನವನ್ನು ಆನ್ವಯಿಕವಾಗಿ ವಿಶ್ಲೇಷಿಸಿ  ಅಳವಡಿಸು ವುದು ಅವಶ್ಯವಿದೆ ಎಂದರು. ಮೌಲ್ಯಮಾಪನ ಕುಲಸಚಿವ ಪ್ರೊ.ಡಿ. ಮುರಹರಿ ನಾಯ್ಕ ಅವರು ಮಾತನಾಡಿ, ಮೂಲ ಕಲೆ, ಸಂಸ್ಕೃತಿ ಇರುವುದೇ ಬುಡಕಟ್ಟು ಸಮುದಾಯಗಳಲ್ಲಿ ಇವರ ಮೂಲ ಅವಶ್ಯಕತೆಗಳೇ ಬೇರೆಯಾಗಿವೆ. ಹೀಗಾಗಿ ಆಧುನಿಕ ಸೌಲಭ್ಯಗಳನ್ನು ನಿರಾಕರಿಸುತ್ತವೆ ಎಂದರು.
 
ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ, ಜಿಲ್ಲಾ ಅಧ್ಯಕ್ಷ ಡಾ. ರಮೇಶ ಎನ್. ತೆವರಿಪ್ರಾಧ್ಯಾಪಕ ಡಾ.ಕೆ.ಪ್ರೇಮಕುಮಾರ ಮತ್ತಿತರರು ಇದ್ದರು. ಶರೀಫ್ ಮಾಕಪ್ಪನವರು ಪ್ರಾರ್ಥಿಸಿದರು. ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಕಾರ್ಯಕ್ರಮ ನಿರೂಪಿಸಿದರು. ವಿಚಾರ ಸಂಕಿರಣದ ಸಂಚಾಲಕ ಡಾ.ಆನಂದಪ್ಪ ಜೋಗಿ ವಂದಿಸಿದರು.

* ಬುಡಕಟ್ಟು ಸಮುದಾಯಗಳು ಭಾರತದ ಸಂಸ್ಕೃತಿ ಸಂರಕ್ಷಿಸಿವೆ. ಆದರೆ ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ನಡುವೆ ನಾವು ಅಂತಃಕರಣ ಮರೆತಿದ್ದೇವೆ
ಬಸವರಾಜ ಬೊಮ್ಮಾಯಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT