ಹಿರೇಕೆರೂರ: ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅಪಾರ ಭಕ್ತ ಸಮೂಹ ವನ್ನು ಹೊಂದಿರುವ, ಪೌರಾಣಿಕ ಹಿನ್ನೆಲೆಯ ಪಟ್ಟಣದ ಅಧಿದೇವತೆ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಗೆ ಒಂಬತ್ತು ನೂತನ ಸದಸ್ಯರ ಆಯ್ಕೆ ಭಾನುವಾರ ನಡೆಯಿತು.

ದೇವಸ್ಥಾನದ ಎದುರು ನಡೆದ ಭಕ್ತರ ಸಭೆಯಲ್ಲಿ ಪಟ್ಟಣದ ಪ್ರಮುಖರು ಪಾಲ್ಗೊಂಡು ನೂತನ ಸದಸ್ಯರನ್ನು ಆಯ್ಕೆ ಮಾಡಿದರು. ಧಾರ್ಮಿಕ ಮತ್ತು ದತ್ತಿ ಇಲಾಖೆಯ ಹೊಸ ಕಾಯ್ದೆಯ ಪ್ರಕಾರ 9 ಸದಸ್ಯರಲ್ಲಿ ಒಬ್ಬ ಅರ್ಚಕ, ಒಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹಾಗೂ 2 ಮಹಿಳೆಯರ ಮೀಸಲಾತಿಯಂತೆ ಈ ನೇಮಕ ಮಾಡಲಾಯಿತು. ಸ್ಥಳೀಯ ನೂರಾರು ಭಕ್ತರು ಪಾಲ್ಗೊಂಡು ದೇವಸ್ಥಾನ ಅಭಿವೃದ್ಧಿಗೆ ತಮ್ಮ ಸಲಹೆ, ಸೂಚನೆಗಳನ್ನು ನೀಡಿದರು.

ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಗದೀಶ ತಂಬಾಕದ ಮಾತನಾಡಿ, ‘ಹಿಂದಿನ ಟ್ರಸ್ಟ್ ಕಾಯ್ದೆಯಡಿ ರಚನೆಯಾಗಿದ್ದ ದೇವಸ್ಥಾನದ ಟ್ರಸ್ಟಿನ 8 ಸದಸ್ಯರಲ್ಲಿ 5 ಸದಸ್ಯರು ನಿಧನ ಹೊಂದಿದ್ದಾರೆ. ಹೊಸ ಕಾಯ್ದೆಯಂತೆ 9 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಬೇಕು’ ಎಂದು ಸಭೆಗೆ ತಿಳಿಸಿದರು.
‘ದೇವಸ್ಥಾನದ ಹಣ ಸ್ಥಳೀಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಕಳೆದ ಫೆ.28ರವರೆಗೆ ನಿಶ್ಚಿತ ಠೇವಣಿ ಬಡ್ಡಿ ಸಹಿತ ₨ 1.12 ಕೋಟಿ ಇದೆ. ಉಳಿತಾಯ ಖಾತೆಯಲ್ಲಿ ₨ 73,077 ಇದೆ’ ಎಂದು ಸಭೆಗೆ ತಿಳಿಸಿದರು.

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಕೆ.ಜಿ.ಶಿವಯೋಗಿ, ಜಿ.ಪಂ, ಸದಸ್ಯೆ ಬಸಮ್ಮ ಅಬಲೂರ, ಬಸವರಾಜ ಹಿತ್ಲಳ್ಳಿ, ಶಂಭಣ್ಣ ಚಿಂದಿ, ಚಂದ್ರಪ್ಪ ಮಾರವಳ್ಳಿ, ಬಿ.ಎಂ. ಹೊಳಿಯಪ್ಪನವರ, ಎಸ್.ಆರ್. ಅಂಗಡಿ, ಗುರುಶಾಂತ ಎತ್ತಿನಹಳ್ಳಿ, ವೀರನಗೌಡ ಪಾಟೀಲ, ಬಿ.ಆರ್. ಪುಟ್ಟಣ್ಣನವರ, ವಿ.ಎಚ್.ಮಾಸೂರು, ಮಾರುತಿ ಮಧೂರಕರ, ಕುಮಾರ ಶಿರಳ್ಳಿ, ಶೇಕಪ್ಪ ತಿಪ್ಪಶೆಟ್ಟಿ, ಜಗದೀಶ ಕಲಾಲ, ಚಂದ್ರಶೇಖರ ಒಡೆಯರ, ಲಿಂಗರಾಜ ನಾಯ್ಕರ, ಮಹೇಶ ನಾಡಿಗೇರ, ಬಸವರಾಜ ಚಿಂದಿ, ಸುರೇಶ ವೈಶ್ಯರ, ಶಂಭು ತಂಬಾಕದ, ರಾಮಣ್ಣ ಗುಡ್ಡಳ್ಳಿ, ಶಿವು ತಿಪ್ಪಶೆಟ್ಟಿ, ರಘು ಮಾಳಮ್ಮನವರ, ವೆಂಕಟೇಶ ಉಪ್ಪಾರ, ಆನಂದ ನಾಯ್ಕರ, ಮಂಜು ಕಾಂಬಳೆ ಇತರರು ಹಾಜರಿದ್ದರು.

ಆಯ್ಕೆಯಾದ ನೂತನ ಸದಸ್ಯರು: ನೂತನ ಸದಸ್ಯರಾಗಿ ಜಗದೀಶ ಬಿ. ತಂಬಾಕದ, ಸುರೇಶ ಮಾಯಾಚಾರಿ, ನಾಗರಾಜ ಗುಡ್ಡಳ್ಳಿ, ಚಂದ್ರು ಮಾರವಳ್ಳಿ, ವನಜಾಕ್ಷಮ್ಮ ಕಲಾಲ, ಬಸಪ್ಪ ಹಂಚಿನಮನಿ, ಶಕುಂತಲಾ ಕೊತ್ವಾಲ, ಸುರೇಶ ಮಡಿವಾಳರ ಹಾಗೂ ಗಣಪತಿ ಕುಲಕರ್ಣಿ ಸರ್ವಸಮ್ಮತವಾಗಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.