ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್‌

Last Updated 16 ಫೆಬ್ರುವರಿ 2017, 11:51 IST
ಅಕ್ಷರ ಗಾತ್ರ
ಸವಣೂರ: ಕೆಡಿಪಿ ಸಭೆಗಳು ಕಾಟಾ ಚಾರದ ಸಭೆಗಳಾಗದೆ ಎಲ್ಲ ತಾಲ್ಲೂಕು ಅಧಿಕಾರಿಗಳು ಭಾಗವಹಿಸಬೇಕು ಮುಂದಿನ ಕೆ.ಡಿ.ಪಿ. ಸಭೆಗೆ ಹಾಜ ರಾಗದೇ ಉಳಿದರೆ ಅಂತಹ ಅಧಿಕಾರಿ ಗಳಿಗೆ ನೋಟಿಸ್‌ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗೇಶ ಮೋತೆ ಆಕ್ರೋಶ ವ್ಯಕ್ತಪಡಿಸಿದರು.
 
ತಾಲ್ಲೂಕು ಪಂಚಾಯ್ತಿ ಸಭಾಂಗಣ ದಲ್ಲಿ ಅಧ್ಯಕ್ಷ ನಾಗೇಶ ಮೋತೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕೆಡಿಪಿ ಸಭೆ ನಡೆಯಿತು.
ಬೆರಳೆಣಿಕೆಯ ಅಧಿಕಾರಿಗಳನ್ನು ಕಂಡು ಆಕ್ರೋಶ ಭರಿತರಾದ ಅಧ್ಯಕ್ಷ ನಾಗೇಶ ಮೋತೆ ಇಂತಹ ಮಹತ್ವದ ಸಭೆಯನ್ನು ಅಧಿಕಾರಿಗಳು ಇಲ್ಲದೇ ಜರುಗಿಸುವುದು ಸಾಧ್ಯವಿಲ್ಲ. ಎಲ್ಲ ತಾಲ್ಲೂಕು ಅಧಿಕಾರಿಗಳು ಹಾಜ ರಾದರೆ ಮಾತ್ರ ಕೆಡಿಪಿ ಸಭೆ ಜರುಗಿಸ ಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು. 
 
ಸಭೆಗೆ ಪಶು ಇಲಾಖೆಯ ಅಧಿಕಾರಿ ವಿಷಯ ಮಂಡಿಸುತ್ತಿದ್ದಂತೆ ಅಧ್ಯಕ್ಷ ಮೋತೆ ಈ ಬಾರಿ ಭೀಕರ ಬರಗಾಲವಿದ್ದು ಜಾನುವಾರುಗಳಿಗೆ ಮೇವಿನ ಕೊರತೆ ತುಂಬಾ ಹೆಚ್ಚಾಗಿರುವುದರಿಂದ ಜಾನುವಾರುಗಳಿಗೆ ನೀವು ಯಾವ ಕ್ರಮವನ್ನು ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿ ದರೆ ಅಧಿಕಾರಿ ಜಲ್ಲೇರವರು ಈಗಾಗಲೇ ಬಂಕಾಪುರ ಹಾಗೂ ರಾಣೆ ಬೆನ್ನೂರು ಎರಡು ಮೇವಿನ ಕೇಂದ್ರಗ ಳನ್ನು ತೆರೆಯ ಲಾಗಿದೆ. ಅವಶ್ಯಕತೆ ಇದ್ದರೆ ರೈತರು ಒಂದು ಜಾನುವರಗೆ ಏಳು ದಿನಕ್ಕೆ ಆಗು ವಷ್ಟು 1 ಕೆ.ಜಿ ಮೇವಿಗೆ ₹ 3 ದರದಲ್ಲಿ ವಿತರಣೆ ಮಾಡಲಾಗುತ್ತದೆ ಎಂದರು.
 
ಪಂಚಾಯ್ತಿ ರಾಜ್ಯ ಎಂಜಿನಿಯರ (ನೀರು ಮತ್ತು ನೈರ್ಮಲ್ಯ) ಇಲಾಖೆಯ ಅಧಿಕಾರಿ ಮಠದ ವಿಷಯ ಮಂಡಿಸಿ ನೀರಿನ ಸಮಸ್ಯೆ ಈಗ ಇಲ್ಲ. ಆದರೆ, ಮುಂದಿನ ದಿನದಲ್ಲಿ ಉಲ್ಬಣ ವಾಗಬಹುದು ಎನ್ನುವಷ್ಟರಲ್ಲಿ ಅಧ್ಯಕ್ಷ ಕಾರಡಗಿ, ಶಿರಬಡಗಿ, ಮಂತ್ರೋಡಿ ಗ್ರಾಮಗಳಲ್ಲಿ  ಶಾಲೆಗಳಲ್ಲಿ ಸುಮಾರು ೫00 ಮಕ್ಕಳು ಇರುವುದರಿಂದ ಅಲ್ಲಿ ಕುಡಿಯಲು ನೀರಿನ ಸಮಸ್ಯೆ ಎದುರಾಗಿ ಮಕ್ಕಳೇ ಕೂಡಗಳನ್ನು ತೆಗೆದುಕೊಂಡು ನೀರು ತರುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ.
 
ಅದಕ್ಕೆ ಏನು ಮಾಡುವಿರಿ ಎಂದು ಪ್ರಶ್ನಿಸಿದರೆ ತಮ್ಮ ಬಳಿ ಯಾವ ಉತ್ತರವೂ ಇಲ್ಲ  ತಹಶೀಲ್ದಾರ ಬಳಿ ಭೇಟಿ ನೀಡಿ ಸಮಸ್ಯೆ ಬಗೆ ಹರಿಸಿ ಕೊಳ್ಳಬೇಕು ಎನ್ನುವಷ್ಟರಲ್ಲಿ ತಾ.ಪಂ. ಅಧಿಕಾರಿ ತಹಶೀಲ್ದಾರ್‌ ಹಾಗೂ ನಾವು ಗಳು ಸೇರಿ ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡಿಸುವುದಾಗಿ ಹೇಳಿದರು.
 
ಅರಣ್ಯ ಇಲಾಖೆಯ ಅಧಿಕಾರಿಯ ಅನುಪಸ್ಥಿತಿಯಲ್ಲಿ ದಿನಗೂಲಿ ನೌಕರಸ್ಥ ಜಾದವ ಕೆಡಿಪಿ ಸಭೆಗೆ ಇಲಾಖೆಯ ವಿಷಯಗಳನ್ನು ಮಂಡಿಸುತ್ತಿದ್ದಂತೆ ಅಧ್ಯಕ್ಷ ಯಾವ ಗ್ರಾಮದಲ್ಲಿ ಎಷ್ಟು ಸಸಿಗಳನ್ನು ನೆಟ್ಟಿದಿರಿ ಅವುಗಳ ನಿರ್ವಹಣೆಯನ್ನು ಯಾವ ರೀತಿ ಮಾಡುತ್ತಿರಿ ಎಂದು ಪ್ರಶ್ನಿಸಿದರೆ ಸುಮನೆ ನಿಂತಿರುವ ಪ್ರಸಂಗ ಕೂಡಾ ನಡೆಯಿತು.
 
ಅಂಗನವಾಡಿ ಮೇಲ್ವಿಚಾರಕಿ ವಿಷಯ ಮಂಡಿಸುತ್ತಿದ್ದಂತೆ ಉಪಾಧ್ಯಕ್ಷೆ ಜಯಶೀಲಾ ರೋಟಿಗವಾಡ ಮಾತ ನಾಡಿ, ಅಂಗನವಾಡಿ ಮಕ್ಕಳಿಗೆ ಎಷ್ಟು ಆಹಾರ ಕೊಡುತ್ತಿರಿ ಹಾಗೂ ಮನೆಯ ಮಕ್ಕಳಿಗೆ ಎಷ್ಟು ನೀಡುತ್ತಿರಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ವಿತರಣೆ ಮಾಡಿ ಉಳಿದ ಎಲ್ಲವನ್ನು ಅಂಗನವಾಡಿ ಕಾರ್ಯ ಕರ್ತೆಯರ ಪಾಲಾಗುತ್ತಿದೆ ಅದನ್ನು ನೀವು ಪರಿಶೀಲನೆ ಮಾಡಿ ಅಪೌಷ್ಟಿಕ ಮಕ್ಕಳಿಗೆ ವಿತರಣೆ ಮಾಡುವಂತಾಗ ಬೇಕು ಎಂದರು. ಅಧ್ಯಕ್ಷ ನಾಗೇಶ ಮೋತೆ, ಉಪಾಧ್ಯಕ್ಷೆ ಜಯಶೀಲಾ ರೋಟಿಗವಾಡ, ಎಂ.ಎಸ್. ಕುರ್ತಕೋಟಿ ಇದ್ದರು.
 
* ಕೆಡಿಪಿ ಸಭೆ ಕಾಟಾಚಾರದ ಸಭೆ ಆಗಬಾರದು  ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕು
-ಜಯಶೀಲಾ ರೋಟಿಗವಾಡ, ಉಪಾಧ್ಯಕ್ಷೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT