ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಬಾದ್: 150 ಕ್ವಿಂಟಲ್‌ ಪಡಿತರ ಅಕ್ಕಿ ಜಪ್ತಿ

Published 13 ಜೂನ್ 2024, 12:37 IST
Last Updated 13 ಜೂನ್ 2024, 12:37 IST
ಅಕ್ಷರ ಗಾತ್ರ

ಶಹಾಬಾದ್: ‘150 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಅಕ್ಕಿ ಸಮೇತ ಬುಧವಾರ ಜಪ್ತಿ ಮಾಡಲಾಗಿದೆ’ ಎಂದು ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮತ್ತು ಸಿಪಿಐ ನಟರಾಜ ಲಾಡೆ ತಿಳಿಸಿದ್ದಾರೆ.

ಶಹಾಬಾದ್ ಮೂಲದ ಜುನೈದ ಎಂಬಾತ ಉಮರ್ಗಾ ಕಡೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ದೇವನ ತೆಗನೂರು ಹತ್ತಿರ ಅಕ್ಕಿ ಸಾಗಿಸುತ್ತಿದ್ದ ಟ್ರಕ್ ಮತ್ತು ಚಾಲಕ ಅನಿಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಮರ್ಗಾ ಅಕ್ಕಿ ಗೋದಾಮು ಮಾಲೀಕನ ವಿರುದ್ಧ ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಶಿವರಾಯ, ಸಿಬ್ಬಂದಿ ಗುಂಡಪ್ಪ, ಶ್ರೀಕಾಂತ್ ಉಪಳಪ್ಪ ಮತ್ತು ಆಹಾರ ಇಲಾಖೆಯ ನಿರ್ದೇಶಕ ಶ್ರೀಕಾಂತ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT