ಜೇವರ್ಗಿ (ಕಲಬುರಗಿ ಜಿಲ್ಲೆ): ಪಡಿತರ ಅಕ್ಕಿಯನ್ನು ಅಕ್ರಮವಾಗಿ ನೆರೆಯ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಜಾಲ ಭೇದಿಸಿರುವ ಜೇವರ್ಗಿ ಪೊಲೀಸರು ಒಬ್ಬನನ್ನು ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನ ಗೋಗಿಯಿಂದ ಅಕ್ಕಿಯನ್ನುಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಮಾಹಿತಿ ಪಡೆದ ಪೊಲೀಸರು ತಾಲ್ಲೂಕಿನ ಬೀದರ್–ಬೆಂಗಳೂರು ರಾಜ್ಯ ಹೆದ್ದಾರಿಯ ಚಿಗರಳ್ಳಿ ಕ್ರಾಸ್ ಬಳಿ ವಾಹನ ತಡೆದರು. ಲಾರಿಯಲ್ಲಿ ಸುಮಾರು 260 ಕ್ವಿಂಟಲ್ ಅಕ್ಕಿ ಇತ್ತು. ಚಾಲಕ ಪರಾರಿ ಆಗಿದ್ದು, ಕ್ಲೀನರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೇವರ್ಗಿ ಪಿಎಸ್ಐ ಸಂಗಮೇಶ ಅಂಗಡಿ, ಆಹಾರ ಇಲಾಖೆ ಶಿರಸ್ತೇದಾರ ಡಿ.ಬಿ.ಪಾಟೀಲ ಇದ್ದರು. ಕಂದಾಯ ಇಲಾಖೆಯ ದೌಲತರಾಯ ಪಾಟೀಲ ದೂರು ನೀಡಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.