ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ದ್ವಿಚಕ್ರ ವಾಹನ ಜಪ್ತಿ: 6 ಆರೋಪಿಗಳ ಬಂಧನ

ಜೇವರ್ಗಿ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಇಶಾ ಪಂತ್ ಶ್ಲಾಘನೆ
Last Updated 26 ಫೆಬ್ರುವರಿ 2022, 14:27 IST
ಅಕ್ಷರ ಗಾತ್ರ

ಜೇವರ್ಗಿ: ಪೊಲೀಸರು ಕಳೆದ ಎರಡು ಮೂರು ತಿಂಗಳಿಂದ ಕಾರ್ಯಚರಣೆ ನಡೆಸಿ ಸುಮಾರು 41 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಈ ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ದ 6 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದರು.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿಚಕ್ರ ವಾಹನ ಕಳ್ಳತನದಲ್ಲಿ ಮಹ್ಮದ್ ರಫೀಕ್, ಅಬ್ದುಲ್ ಗನಿ ಇನಾಮದಾರ, ಇಮ್ರಾನ್ ಕಾಸಿಂ ಪಟೇಲ್, ಆರೀಫ್ ಮೆಹಬೂಬ್ ಪಟೇಲ್ ಮಿಣಜಗಿ, ಇಬ್ರಾಹಿಂ ಖಾದೀರ ಪಟೇಲ್ ಮಿಣಜಗಿ, ಮಹ್ಮದ್ ಫಾರೂಖ್ ಅಬ್ದುಲ್ ರೆಹಮಾನ್, ಆಸೀಫ್ ಫಕೀರ ಪಟೇಲ್ ಭಾಗಿಯಾಗಿದ್ದರು. ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ 9 ಪ್ರಕರಣಗಳು ದಾಖಲಾಗಿದ್ದು, 8 ಪ್ರಕರಣಗಳು ಪತ್ತೆಯಾಗಿವೆ. ಕಲಬುರಗಿ ಚೌಕ್ ಪೊಲೀಸ್ ಪೊಲೀಸ್ ಠಾಣೆಯ 1, ಬ್ರಹ್ಮಪೂರ ಪೊಲೀಸ್ ಠಾಣೆಯ 3, ರೋಜಾ ಠಾಣೆಯ 1, ಅಶೋಕನಗರ ಠಾಣೆಯ 1, ಸ್ಟೇಶನ್ ಬಜಾರ್ ಠಾಣೆಯ 2, ಶಹಾಪುರ ನಗರದ 2, ಯಾದಗಿರಿ ನಗರದ 2 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇಶಾ ಪಂತ್ ಹೇಳಿದರು.

ಜೇವರ್ಗಿ, ಕಲಬುರಗಿ, ಯಾದಗಿರಿಯಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಜೇವರ್ಗಿ ಪೊಲೀಸ್ ಠಾಣೆಯ ಸಿಪಿಐ ಶಿವಪ್ರಸಾದ ಮಠದ್, ಪಿಎಸ್‌ಐ ಸಂಗಮೇಶ ಅಂಗಡಿ, ಅಪರಾಧ ವಿಭಾಗದ ಪಿಎಸ್‌ಐ ಸಿದ್ರಾಮಪ್ಪ ಹಾಗೂ ಸಿಬ್ಬಂದಿ ಬಸನಗೌಡ, ಯಲ್ಲಾಲಿಂಗ, ಶ್ರೀಮಂತ, ಅಂಬರೀಷ, ಆನಂದ ನಾಯ್ಕ, ಶಿವಲಿಂಗಪ್ಪ ಪತ್ತೆ ಮಾಡಿ ಕಳ್ಳರನ್ನು ಬಂಧಿಸಿರುವುದು ಶ್ಲಾಘನೀಯ ಎಂದು ಪಂತ್ ಹೇಳಿದರು.

ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಸಿಪಿಐ ಶಿವಪ್ರಸಾದ, ಪಿಎಸ್‌ಐ ಸಂಗಮೇಶ ಅಂಗಡಿ, ಅಪರಾಧ ವಿಭಾಗದ ಪಿಎಸ್‌ಐ ಸಿದ್ರಾಮಪ್ಪ, ಎಎಸ್‌ಐ ಗುರಯ್ಯ ಹಿರೇಮಠ, ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಲಾಲಪ್ಪ, ಉಮೇಶ, ಸಿದ್ದಲಿಂಗ ರೆಡ್ಡಿ, ಧರ್ಮರಾಜ, ಅನಿಲಕುಮಾರ, ಸಿದ್ದಣ್ಣ, ವೀರಣ್ಣಗೌಡ, ಚಂದ್ರಾಮ ನಡಿಹಾಳ, ರಾಜಕುಮಾರ, ಅವ್ವಣ್ಣ, ಶಿವರಾಯ, ಸಕರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT