ಭಾನುವಾರ, ಅಕ್ಟೋಬರ್ 25, 2020
21 °C
ಮತ್ತೆ 179 ಜನರಲ್ಲಿ ಹೊಸದಾಗಿ ಸೋಂಕು

ಕಲಬುರ್ಗಿ: ಕೋವಿಡ್‌ನಿಂದ ಮತ್ತೆ 6 ಜನ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೋವಿಡ್–19 ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ 6 ಜನ ನಿಧನರಾಗಿರುವ ಬಗ್ಗೆ ಶುಕ್ರವಾರ ವರದಿಯಾಗಿದ್ದು, ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ 50 ವರ್ಷದ ಪುರುಷ ಸೆ 29ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಕೆ.ಎಚ್.ಬಿ. ಕಾಲೊನಿಯ 68 ವರ್ಷದ ವೃದ್ಧೆ ಸೆ.15ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ
ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರ್ಗಿಯ ಅತ್ತರ್ ಕಂಪೌಂಡ್ ನಿವಾಸಿ 60 ವರ್ಷದ ವೃದ್ಧ ಸೆ 14ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು.

ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಕಲಬುರ್ಗಿಯ ಭವಾನಿ‌ ನಗರದ 68 ವರ್ಷದ ವೃದ್ಧ ಸೆ 15ರಂದು ಅಸ್ಪತ್ರೆಯಲ್ಲಿ ನಿಧನರಾದರು.

ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಶಹಾಬಾದ ಪಟ್ಟಣದ ಬಸವೇಶ್ವರ ನಗರದ 59 ವರ್ಷದ ಪುರುಷ ಸೆ 15ರಂದು ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಕಮಲಾಪುರ ತಾಲ್ಲೂಕಿನ ರಾಜನಾಳ ಗ್ರಾಮದ 45 ವರ್ಷದ ಪುರುಷ ಸೆ 15ರಂದು ಸಾವಿಗೀಡಾದರು.

179 ಜನರಲ್ಲಿ ಸೋಂಕು: ಶುಕ್ರವಾರ ಜಿಲ್ಲೆಯ 179 ಜನರಲ್ಲಿ ಕೋವಿಡ್–19 ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15,333ಕ್ಕೆ ಏರಿಕೆಯಾಗಿದೆ. 202 ಜನರು ಗುಣಮುಖರಾಗಿದ್ದು, ಒಟ್ಟಾರೆ 12,320 ಜನರು ಸೋಂಕನ್ನು ಗೆದ್ದಂತಾಗಿದೆ. 2759 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು