ಕಾಳಗಿ: ಕಲಬುರಗಿ-ಚಿಂಚೋಳಿ ಮಾರ್ಗ ಮಧ್ಯೆ ಕಾಣಸಿಗುವ ಐತಿಹಾಸಿಕ ತೀರ್ಥಕ್ಷೇತ್ರ, ದಕ್ಷಿಣಕಾಶಿ ಕಾಳಗಿ ಶಿಲೆಯಲ್ಲಿ ಅರಳಿದ ಶಿಲ್ಪ ಕಾವ್ಯಗಳಿಗೆ ನೆಲೆ ನೀಡಿದೆ.

ಇಲ್ಲಿನ ಇತಿಹಾಸ ಪ್ರಸಿದ್ಧ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ (ಏ.23)ಬುಧವಾರ ಸಂಜೆ 6ಗಂಟೆಗೆ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಈ ನಿಮಿತ್ತ ಇಡೀ ಪಟ್ಟಣ ಹಾಗೂ ದೇವಸ್ಥಾನದ ಪರಿಸರ ಮದುವಣ ಗಿತ್ತಿಯಂತೆ ಸಿಂಗಾರಗೊಂಡು ನೋಡುಗರಿಗೆ ಕೈ ಮಾಡಿ ಕರೆಯುತ್ತಿದೆ.

ಮನ್ನೆದಡಿ ಸಾಸಿರದ ರಾಜಧಾನಿಯಾಗಿದ್ದ ಈ ಊರಿನಲ್ಲಿ ಸೋಮೇಶ್ವರ, ಬಿಬ್ಬೇಶ್ವರ, ಕಾಳೇಶ್ವರ, ಜಯಲಿಂಗೇಶ್ವರ, ಗೊಂಕೇಶ್ವರ ಮೊದಲಾದ ದೇವಾಲಯಗಳ ಸಮುಚ್ಛಯವೇ ನೆಲೆಯೂರಿದೆ. ಈ ದೇಗುಲಗಳು ಬಾಣ ವಂಶೋದ್ಭವ ಮಹಾಮಾಂಡಳಿಕರಾದ ಬಿಬ್ಬರಸ, ಗೊಂಕರಸರಿಂದ ನಿರ್ಮಿಸಲ್ಪಟ್ಟಿವೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಮಲ್ಲೋಜ, ಬಮ್ಮೋಜ, ಕೊಪ್ಪದ ಮಲ್ಲೋಜ, ಅವರೋಜ, ರಾಮೋಜರೆಂಬ ಮಹಾನ್ ಶಿಲ್ಪಿಗಳು ಕಾಳಗಿ ದೇವಾಲಯಗಳ ನಿರ್ಮಾತೃಗಳು ಎಂದು ಶಾಸನಗಳು ಸಾರುತ್ತವೆ. ಇಲ್ಲಿನ ದೇಗುಲಗಳ ಭಿತ್ತಿಯಲ್ಲಿರುವ ಶಿಲಾ ಬಾಲಿಕೆಯರು ಬೇಲೂರಿನ ಶಿಲಾ ಬಾಲಿಕೆಯರ ಅಕ್ಕಂದಿರಂತಿದ್ದಾರೆ ಎನ್ನುತ್ತಾರೆ ಶಾಸನ ಸಂಶೋಧಕ ಎಂ.ಎಸ್. ಸಿರವಾಳ.

ಯಾವ ಬರಗಾಲಕ್ಕೂ ಬತ್ತದ ಸೆಲೆಯ ರೌದ್ರಾವತಿ ನದಿ ಜೀವ ಜಲವಾಗಿದೆ. ಜುಳುಜುಳು ಹರಿಯುವ ತಿಳಿ ನೀರಿನ ಗುಳ್ಳೆಗಳ ಅದೇಷ್ಟೊ ತೀರ್ಥಕುಂಡಗಳು ಇಂದಿಗೂ ಜೀವಂತ ಇವೆ. ಪುಷ್ಕರಣಿಯೊಂದರ ಸ್ವಚ್ಚ ಸಲಿಲದ ಮಧ್ಯದಲ್ಲಿ ಬಹುಕೋನಾಕೃತಿಯಲ್ಲಿ ನಿರ್ಮಿಸಿರುವ ಅನಂತ ಪದ್ಮನಾಭ ದೇಗುಲ ನೋಡಲಂತೂ ಜನರ ಕಣ್ಣುಗಳು ಸಾಲವು.

ನಮ್ಮ ಕನ್ನಡ ನಾಡಿನ ಪುರಾತನ ಸಂಸ್ಕೃತಿಯ ಹೆಮ್ಮೆಯ ಪ್ರತೀಕಗಳಾಗಿರುವ ಮತ್ತು ಇಂದೊ ನಾಳೆಯೋ ಬಿದ್ದುಹೋಗುವ ಹಂತದಲ್ಲಿರುವ ಕಾಳಗಿಯ ಸ್ಮಾರಕಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆ ಬರಬೇಕಿದೆ. ಸ್ಥಳೀಯ ಜನರು ಟೊಂಕಕಟ್ಟಿ ನಿಲ್ಲಬೇಕಿದೆ. ಅಂದಾಗ ಮಾತ್ರ ನಾವು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ನಿಜವಾದ ಅರ್ಥ ಬರುತ್ತದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

ಜಾತ್ರೆಯ ಕಾರ್ಯಕ್ರಮಗಳು: ಇಂದು (ಏ.23) ಬೆಳಿಗ್ಗೆ 4 ಗಂಟೆಗೆ ಪ್ಯಾಟಿಮಠದಿಂದ ಉಚ್ಚಾಯ ಮೆರವಣಿಗೆ ಆರಂಭವಾಗಲಿದೆ. ಬೆಳಿಗ್ಗೆ 6 ಗಂಟೆಗೆ ವೀರಭದ್ರೇಶ್ವರ ಅಗ್ನಿಪ್ರವೇಶ, ಸಂಜೆ 4 ಗಂಟೆಗೆ ಕುಂಭ, ಕಳಸ, ನಂದಿಕೋಲಿನ ಭವ್ಯ ಮೆರವಣಿಗೆ, ಸಂಜೆ 6 ಗಂಟೆಗೆ ರಥೋತ್ಸವ ಹಾಗೂ ಮದ್ದು ಸುಡುವುದು, ರಾತ್ರಿ 10.30ಕ್ಕೆ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

24ರಂದು ಬೆಳಿಗ್ಗೆ 6 ಗಂಟೆಗೆ ಊರಿನ ಪ್ರಮುಖ ರಸ್ತೆಗಳಲ್ಲಿ ವಿಶೇಷ ಪಲ್ಲಕ್ಕಿ ಮೆರವಣಿಗೆ ಆರಂಭವಾಗಲಿದೆ. ಸಂಜೆ 4 ಗಂಟೆಗೆ ಜಂಗಿ ಪೈಲ್ವಾನರಿಂದ ಕುಸ್ತಿಗಳು ಜರುಗಲಿವೆ.

ಕಾಳಗಿಯ ಈ ಅತ್ಯದ್ಭುತ ಸ್ಮಾರಕಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಕಂಕಣಬದ್ಧವಾಗಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಿದೆ
ಜಗದೇವ ಗುತ್ತೇದಾರ ಎಂಎಲ್ಸಿ ಕಾಳಗಿ

ಇಲ್ಲಿನ ಶಿಲ್ಪಕಲೆ ನೀರಿನ ಮಹಿಮೆ ಎಷ್ಟುಕೊಂಡಾಡಿದರೂ ಸಾಲದು. ಸರ್ಕಾರ ಕಾಳಗಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಮುಂದೆ ಬರಬೇಕು
ಬಸವರಾಜ ಪ್ಯಾಟಿಮಠ ಕಾಳಗಿ ಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.