‘ಸ್ವದೇಶಿ ಅಭಿಯಾನವು ನಮ್ಮೆಲ್ಲರ ಮನಕ್ಕೆ ಇಳಿಯಬೇಕಿದೆ ಮನೆಗಳನ್ನೂ ತಲುಪಬೇಕಿದೆ. ಅಂದಾಗ ನರೇಂದ್ರ ಮೋದಿ ಕಂಡ ಆತ್ಮನಿರ್ಭರ ಭಾರತ ಕನಸು ಸಾಕಾರಗೊಳ್ಳುತ್ತದೆ’ ಎಂದು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಪ್ರತಿಪಾದಿಸಿದರು. ‘ದೇಶದಲ್ಲಿ ನರೇಂದ್ರ ಮೋದಿ ಆಡಳಿತದ ಫಲವಾಗಿ ದೇಶವು ಆತ್ಮನಿರ್ಭರ ಭಾರತ ಆಗುತ್ತಿದೆ ಒಂದು ವೇಳೆ ಕಾಂಗ್ರೆಸ್ ರಾಹುಲ್ ಗಾಂಧಿ ಆಡಳಿತವಿದ್ದಿದ್ದರೇ ದೇಶವು ವಿದೇಶಿ ಅವಲಂಬಿತ ಭಾರತವಾಗುತ್ತಿತ್ತು’ ಎಂದು ಟೀಕಿಸಿದರು.