ಮಂಗಳವಾರ, ನವೆಂಬರ್ 12, 2019
28 °C

ಅಪಘಾತ: ಬಿಜೆಪಿ ಮುಖಂಡ ಶಶೀಲ್‌ ಜಿ. ನಮೋಶಿ ಪಾರು

Published:
Updated:
Prajavani

ಕಲಬುರ್ಗಿ: ವಿಧಾನಪರಿಷತ್‌ ಮಾಜಿ ಸದಸ್ಯ, ಬಿಜೆಪಿ ಮುಖಂಡ ಶಶೀಲ್‌ ಜಿ. ನಮೋಶಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಶಹಾಪುರ ಬಳಿ ಹಿಂದಿನಿಂದ ಬಂದ ಲಾರಿ ಶುಕ್ರವಾರ ರಾತ್ರಿ ಡಿಕ್ಕಿ ಹೊಡೆದು ಕಾರು ಪಕ್ಕದ ಹೊಲಕ್ಕೆ ಹೊರಳಿದ್ದು, ಕಾರಿನ ಬಲಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ನಮೋಶಿ ಹಾಗೂ ಕಾರಿನಲ್ಲಿದ್ದ ಇನ್ನಿಬ್ಬರಿಗೆ ಯಾವುದೇ ಗಾಯಗಳಾಗಿಲ್ಲ. 

ಲಾರಿಯು ಮರಕ್ಕೆ ಕಾರಿಗೆ ಗುದ್ದಿದ ಬಳಿಕ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಶಹಾಪುರ ಕಡೆಯಿಂದ ನಗರಕ್ಕೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯ ಮಾಹಿತಿ ಪಡೆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಶನಿವಾರ ನಮೋಶಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪ್ರತಿಕ್ರಿಯಿಸಿ (+)