ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಜಗಿಗೆ ಹೆಚ್ಚಿನ ಅನುದಾನ: ಶಾಸಕ

ಶಾಸಕ ಎಂ.ವೈ.ಪಾಟೀಲ ಹೇಳಿಕೆ
Last Updated 28 ಅಕ್ಟೋಬರ್ 2022, 6:37 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಜನರ ಬೇಡಿಕೆಗೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗಾಣಗಾಪೂರ–ಪಂಢರಪುರಕ್ಕೆ ಸಂಚರಿ ಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ಸಚಿವರಿಗೆ ಪ್ರಸ್ತಾವ ಸಲ್ಲಿ ಸಿದ್ದು ಮಂಜೂರಾಗುವ ಭರವಸೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.

ತಾಲ್ಲೂಕಿನ ಕರಜಗಿ ಗ್ರಾಮದಿಂದ ಅಫಜಲಪುರ ಮುಖ್ಯ ರಸ್ತೆಗೆ ₹5 ಕೋಟಿ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಈ ಗ್ರಾಮಕ್ಕೆ ಪಬ್ಲಿಕ್ ಶಾಲೆ, ಮೊರಾರ್ಜಿ ವಸತಿ ಶಾಲೆ, ಪದವಿ ಕಾಲೇಜು ನೀಡಿದೆ. ಕರಜಗಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮು ದಾಯ ಆರೋಗ್ಯ ಕೇಂದ್ರವಾಗಿ ಮಾಡಲಾಗುವುದು. ಇದರಿಂದ ವೈದ್ಯರ ಸಂಖ್ಯೆ ಹೆಚ್ಚಾಗುತ್ತದೆ. ದೇವ ಲ ಗಾಣಗಾಪುರ ದಿಂದ ಕರಜಗಿ ಮಾರ್ಗ ವಾಗಿ ಪಂಡರಾಪುರಕ್ಕೆ ಸಂಚರಿಸುವ ರಾಷ್ಟ್ರೀಯ ದಾರಿ ನಿರ್ಮಾಣ ಮಾಡ ಲಾಗುವುದು. ಅದಕ್ಕಾಗಿ ಕೇಂದ್ರ ಸಾರಿಗೆ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಕರಜಗಿ ಗ್ರಾಮದಲ್ಲಿ ಸುರಪುರ ಮಾದರಿಯಲ್ಲಿ ಮಳೆ ನೀರು ಸಂಗ್ರಹಿ ಸಲು ಸಣ್ಣ ಸಣ್ಣ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ ₹50 ಕೋಟಿ ನೀಡಿದೆ. ಬೇಸಿಗೆಯಲ್ಲಿ ಕೆಲಸ ಆರಂಭವಾಗಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಮತೀನ ಪಟೇಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ಕೋನಳ್ಳಿ ಹಾಗೂ ಸದಸ್ಯ ಇರ್ಫಾನ ಜಮಾದಾರ ಮಾತನಾ ಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಮುಖಂಡರಾದ ಮಹಾದೇವ ಕರೂಟಿ, ಜಿಪಂ ಮಾಜಿ ಸದಸ್ಯ ಮತೀನ ಪಟೇಲ್, ಶಿವಪುತ್ರಪ್ಪ ಜಿಡ್ಡಗಿ, ಶಿವಾನಂದ ಗಾಡಿಸಾಹುಕಾರ, ಮಳೇಂದ್ರ ಡಾಂಗೆ,
ಮಹಮ್ಮದಹನೀಫ ಜಮಾದಾರ, ಅಭಿಷೇಕ ಪಾಟೀಲ್, ನಾನಾಗೌಡ ಪಾಟೀಲ್, ರಾಜು ಬಬಲಾದ, ಮತ್ತಪ್ಪ ಚಂದನ, ಕಾಂತು ಈಶ್ವರಗೊಂಡ. ಎಇಇ ಹೊನ್ನೇಶ ಅಳ್ಳಗಿ ಮತ್ತಿತರಿದ್ದರು. ಸಚಿನ ಕಿನಗಿ ಕಿಣಗಿ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT