ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಂದ ಜಯಂತಿ ಉದ್ಘಾಟನೆ

Last Updated 15 ಏಪ್ರಿಲ್ 2022, 4:10 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶಾಸಕ ಸುಭಾಷ್ ಗುತ್ತೇದಾರ್ ಉದ್ಘಾಟಿಸಿದರು. ಬಳಿಕ ಅಂಬೇಡ್ಕರ್ ಕೊಡುಗೆ ಬಗ್ಗೆ ಶಾಸಕರು ಮಾತನಾಡಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕಿರಣ ಗಾಜನೂರು ಮಾತನಾಡಿದರು.

ಧುತ್ತರಗಾಂವನ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದರು. ದಯಾನಂದ ಶೇರಿಕಾರ, ಪ್ರಕಾಶ ಮೂಲಭಾರತಿ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿದರು.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಮುಖ್ಯಾಧಿಕಾರಿ ವಿಜಯ ಮಹಾಂತೇಶ, ತಾಪಂ ಇಒ ಡಾ.ಸಂಜಯ ರೆಡ್ಡಿ, ನಾಗಮೂರ್ತಿ ಶೀಲವಂತ, ಡಿವೈಎಸ್ಪಿ ರವೀಂದ್ರ ಶಿರೂರು, ಮೊನ್ನಮ್ಮ ಸುತಾರ, ಆನಂದರಾವ ಗಾಯಕವಾಡ, ನಾಗೇಂದ್ರ ಮಾನೆ, ಜೆ.ಕೆ.ಅನ್ಸಾರಿ ವಂದಿಸಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕರ್ನಾಟಕ ದಲಿತ ಸೇನೆಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಬಂತೇಜಿ ಅಮರಜ್ಯೋತಿ, ಕೋರಣೇಶ್ವರ ಸ್ವಾಮೀಜಿ, ಶಾಂತಿವನ ಚರ್ಚ್ ಫಾದರ್ ಅನೀಲ ಪ್ರಸಾದ, ಬಾಬುರಾವ ಅರುಣೋದಯ, ಧರ್ಮಣ್ಣಾ ಪೂಜಾರಿ, ಬಸವಲಿಂಗಪ್ಪ ಗಾಯಕವಾಡ ಇದ್ದರು.

ಸಮತಾಲೋಕ ಶಿಕ್ಷಣ ಸಮಿತಿ ಆವರಣದಲ್ಲಿಯೂ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಂಬುದ್ಧ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶಿವಲಾಲ ಹತ್ತಿ, ನಾಗಣ್ಣಾ ಸಲಗರೆ, ಬಸವರಾಜ ಕಡಗಂಚಿ, ಶರಣಬಸಪ್ಪ ಇಟಗಿ, ವಿದ್ಯಾಸಾಗರ ದೊಡ್ಡಮನಿ, ಅಪ್ಪಾಸಾಹೇಬ ತೀರ್ಥೆ, ವಿಶ್ವನಾಥ ಭಕರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT