ಚಿತ್ತಾಪುರ: ಸಾಹಿತಿ, ಜಾನಪದ ವಿದ್ವಾಂಸ ಏಚ್.ಎಲ್. ನಾಗೇಗೌಡ ಸ್ಥಾಪಿಸಿದ 44 ವರ್ಷ ಇತಿಹಾಸವಿರುವ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಜಾನಪದ ಸಂಘಟಕರಾದ ನಾಗಯ್ಯ ಸ್ವಾಮಿ ಅಲ್ಲೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ ತಿಳಿಸಿದ್ದಾರೆ.
ಪರಿಷತ್ತಿನ ಮಾರ್ಗಸೂಚಿಯಂತೆ ತಾಲ್ಲೂಕಿನ ಜಾನಪದ ಕಾರ್ಯಕ್ರಮಗಳು ಹಮ್ಮಿಕೊಂಡು ಗ್ರಾಮಿಣ ಭಾಗದ ಜಾನಪದ ಕಲಾವಿದರನ್ನು ಗುರುತಿಸಬೇಕು. ಜಾನಪದ ವಿದ್ವಾಂಸರಿಂದ ವಿಚಾರ ಸಂಕಿರಣ, ಉಪನ್ಯಾಸ ಸೇರಿದಂತೆ ನಿರಂತರ ಕಾರ್ಯಕ್ರಮಗಳು ಹಮ್ಮಿಕೊಂಡು ಜಾನಪದ ಪರಿಷತ್ತು ಕ್ರಿಯಾಶೀಲವಾಗಿ ಮಾಡಬೇಕು ಎಂದು ನೇಮಕದ ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.