ಶನಿವಾರ, ಫೆಬ್ರವರಿ 4, 2023
18 °C

ಗಾಯತ್ರಿ ಶಿಲ್ಪಕಲಾ ಪ್ರದರ್ಶನ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಗರದ ಶಿಲ್ಪ ಕಲಾವಿದೆ ಗಾಯತ್ರಿ ಎ. ಶಿಲ್ಪಿ ಅವರ ಏಕವ್ಯಕ್ತಿ ಶಿಲ್ಪಕಲಾ ‍ಪ್ರದರ್ಶನ ಇದೇ 16ರಿಂದ 18ರವರೆಗೆ ಇಲ್ಲಿನ ಓಂ ನಗರದ ಎಂ.ಬಿ. ಲೋಹಾರ ಆರ್ಟ್‌ ಗ್ಯಾಲರಿಯಲ್ಲಿ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಿಂದ ನಡೆಯುವ ಈ ಪ್ರದರ್ಶನದ ಉದ್ಘಾಟನೆ ಇದೇ 16ರಂದು ಸಂಜೆ 4.30ಕ್ಕೆ ನೆರವೇರಲಿದೆ. ಸಾನ್ನಿಧ್ಯವನ್ನು ಏಕದಂಡಿ ಮಠದ ಸುರೇಂದ್ರ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೆರವೇರಿಸುವರು. ಅತಿಥಿಗಳಾಗಿ ಹಿರಿಯ ಶಿಲ್ಪ ಕಲಾವಿದ ಚಂದ್ರಶೇಖರ ಶಿಲ್ಪಿ, ಎಂ.ಎ. ಟೆಂಗಳಿಕರ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಧ್ಯಕ್ಷರಾದ ಚಿತ್ರಲೇಖ ಎ. ಟೆಂಗಳಿಕರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ನಟರಾಜ ಎಂ. ಶಿಲ್ಪಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಎಂ.ಬಿ. ಲೋಹಾರ ಆರ್ಟ್‌ ಗ್ಯಾಲರಿಯ ಸಾಯಿನಾಥ ಲೋಹಾರ ವಹಿಸುವರು.

16ರಿಂದ 18ರವರೆಗೆ ನಿತ್ಯ ಬೆಳಿಗ್ಗೆ 11ರಿಂದ ಸಂಜೆ 5.30ರವರೆಗೆ ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು