ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡು ಮಾಡುವ ಸಂಸ್ಕೃತಿ ಉತ್ತಮವಲ್ಲ: ಸೋಮಶೇಖರ ಶಿವಾಚಾರ್ಯರ

ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರ ಅಭಿಮತ
Last Updated 5 ಮೇ 2022, 3:02 IST
ಅಕ್ಷರ ಗಾತ್ರ

ವಾಡಿ: ‘ಇಂದಿನ ದಿನಗಳಲ್ಲಿ ದುಡಿಮೆ ಸಂಸ್ಕೃತಿ ಕಣ್ಮರೆಯಾಗಿ ದುಡಿಯದೇ ದುಡ್ಡು ಮಾಡಬೇಕು ಎಂಬ ರೋಗ ಮನುಷ್ಯರಿಗೆ ಮೆತ್ತಿಕೊಳ್ಳುತ್ತಿದೆ. ಇದು ಬಸವ ಸಂಸ್ಕೃತಿಗೆ ತೀರಾ ವಿರುದ್ಧವಾಗಿದೆ’ ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ವಿಶ್ವಗುರು ಬಸವಣ್ಣನವರ 889ನೇ ಜಯಂತಿಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಯಕವೇ ತಮ್ಮ ನಾಯಕ ಎಂದು ದುಡಿದ ವ್ಯಕ್ತಿಗಳು ಹಾಗೂ ಕಾಯಕವೇ ಕೈಲಾಸ ಎಂಬ ಮಂತ್ರ ಹೇಳಿದ ವಿಶ್ವಗುರು ಬಸವಣ್ಣನವರು ನಮ್ಮ ಆದರ್ಶವಾಗಬೇಕು ಎಂದರು.

ರಂಜಾನ್ ಮತ್ತು ಬಸವಜಯಂತಿ ಒಟ್ಟಿಗೆ ಒಂದೇ ದಿನ ಬಂದಿರೋದು ಜಗತ್ತಿಗೆ ಬಸವಣ್ಣ ಮತ್ತು ಮುಹಮದ್ ಪೈಗಂಬರ್ ವೈಚಾರಿಕತೆ ಹಾಗೂ ಸೌಹಾರ್ದತೆ ಸಂದೇಶ ಸಾರಿದಂತಾಗಿದೆ. ಭೂಮಿಯ ಮೇಲೆ ಇರುವಷ್ಟು ದಿನ ಪರಸ್ಪರ ಸಹೋದರತ್ವದಿಂದ ಬದುಕಿದರೆ ಶರಣರ ಜಯಂತಿ ಆಚರಣೆ ಮಾಡಿದ್ದಕ್ಕೆ ಸಾರ್ಥಕ ವಾಗುತ್ತದೆ ಎಂದರು.

ಮುಖಂಡ ಬಸವರಾಜ ಪಂಚಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವೀರಶೈವ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರು ಕಾರ್ಯದರ್ಶಿ ಬಸವರಾಜ ಕಿರಣಗಿ, ಪುರಸಭೆ ಉಪಾಧ್ಯಕ್ಷ ದೇವಿಂದ ಕರದಳ್ಳಿ, ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳಿ, ಎಸಿಸಿ ಪ್ಯಾಂಟ್ ಮುಖ್ಯಸ್ಥ ರಾಘವೇಂದ್ರ ಜಾಗೀರದಾರ, ಎಸಿಸಿ ಎಚ್‌ ಆರ್ ವಿಭಾಗದ ಮುಖ್ಯಸ್ಥ ನಾಗೇಶ್ವರ ರಾವ ತೆನ್ನತ್ತಿ, ಟೋಪಣ್ಣ ಕೋಮಟೆ, ಬಾಬುಮಿಯ್ಯಾ, ಸೈಯ್ಯದ್ ಮಹೇಮದ ಸಾಹೇಬ, ರಮೇಶ ಕಾರಬಾರಿ, ಭೀಮರಾವ ದೊರೆ, ಅಶೋಕ ಸೂರ್ಯವಂಶಿ, ಶಿವರಾಮ್ ಪವಾರ, ನಾಗೇಂದ್ರ ಜೈಗಂಗಾ, ವಿಠಲ ನಾಯಕ, ಶಂಕ್ರಯ್ಯಸ್ವಾಮಿ ಮದ್ರಿ, ಶ್ರವಣ ಕುಮಾರ್ ಮೌಸಲಗಿ, ರಘುವೀರ ಪವಾರ, ಕಿಶಾನ ಜಾಧವ, ವಿ.ಕೆ.ಕೇದಲಾಯಿ , ಜಯದೇವ
ಜೋಗಿಮಠ, ಸೂರ್ಯಕಾಂತ ರದ್ದೇವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ವೀರಣ್ಣ ಯಾರಿ ನಿರೂಪಿಸಿದರು. ಸಿದ್ದಣ್ಣ ಕಲಶೆಟ್ಟಿ ವಂದಿಸಿದರು.

ವಾಡಿ ಪೊಲೀಸ್ ಠಾಣೆ ಪಿಎಸ್‌ಐ ಮಹಾಂತೇಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಮುನೀಂದ್ರ ಶ್ರೀಗಳು ಹಾಗೂ ಸೋಮಶೇಖರ ಶ್ರೀಗಳು ಬಸವೇಶ್ವರ ಪ್ರತಿಮೆಗೆ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT