ಸೋಮವಾರ, ನವೆಂಬರ್ 18, 2019
27 °C

ಭಾವಿಕಟ್ಟಿಗೆ ನ 14ರವರೆಗೆ ನ್ಯಾಯಾಂಗ ಬಂಧನ

Published:
Updated:

ಕಲಬುರ್ಗಿ: ಆಳಂದ ಡಿಪೊ ವ್ಯವಸ್ಥಾಪಕರ ವಿರುದ್ಧ ಇದ್ದ ಪ್ರಕರಣಗಳನ್ನು ಕೈಬಿಡಲು ₹ 50 ಸಾವಿರ ಲಂಚವನ್ನು ಸಹಾಯಕರ ಮೂಲಕ ಪಡೆಯುವ ವೇಳೆ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ (ವಿಭಾಗ–2) ಶರಣಪ್ಪ ಡಿ.ಭಾವಿಕಟ್ಟಿ ಅವರನ್ನು ಇದೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸೋಮವಾರ ಸಂಜೆ ಎಸಿಬಿ ದಾಳಿಗೆ ಒಳಗಾಗಿದ್ದ ಭಾವಿಕಟ್ಟಿ ಹಾಗೂ ಸಹಾಯಕ ಸಾರಿಗೆ ನಿಯಂತ್ರಣಾಧಿಕಾರಿ ಜಯವಂತ್‌ ಅವರ ಬಂಧನವಾಗಿ 24 ಗಂಟೆ ಕಳೆದಿದ್ದರಿಂದ ಅಮಾನತು ಪ್ರಕ್ರಿಯೆಯನ್ನು ನಿಗಮ ಆರಂಭಿಸಿದೆ. ಹೀಗಾಗಿ ಭಾವಿಕಟ್ಟಿ ಅವರ ಜಾಗಕ್ಕೆ ಕೇಂದ್ರ ಕಚೇರಿಯಲ್ಲಿ ಉಪ ಪ್ರಧಾನ ಸಂಚಾರ ವ್ಯವಸ್ಥಾಪಕರಾಗಿದ್ದ ತಿಮ್ಮಾರೆಡ್ಡಿ ಅವರನ್ನು ವಿಭಾಗೀಯ ನಿಯಂತ್ರಣಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)