ಮಂಗಳವಾರ, ಜನವರಿ 31, 2023
26 °C

ಕಲಬುರ್ಗಿ: ನಿಂತ ಲಾರಿಗೆ ಬೈಕ್ ಡಿಕ್ಕಿ– ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ (ಕಲಬುರ್ಗಿ): ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದು, ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕಮಲಾಪುರ ಬಳಿಯ ನಾವದಗಿ ಸಮೀಪದ ದೇಶಿ ಕೇಂದ್ರ ಶಾಲೆ ಬಳಿ ನಡೆದಿದೆ.

ಗೋಗಿ ತಾಂಡಾದ ನಿವಾಸಿ ದೀಪಕ ಗೋವಿಂದ ರಾಠೋಡ್ (45), ಅವರ ಸಹೋದರನ ಪುತ್ರ, ಕಲಬುರಗಿಯ ದಾಮೋದರ ರಘೋಜಿ ಕಾಲೇಜಿನ ಪಿಯುಸಿ ಪ್ರಥಮ ವರ್ಷದ  ವಿದ್ಯಾರ್ಥಿ ಯುವರಾಜ್ ರಾಮಶೆಟ್ಟಿ ರಾಠೋಡ್ (17), ಸೋದರಳಿಯ  ಕಮಲಾಪುರ ಎಚ್ ಕೆಇ ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿ ರಾಹುಲ ಖೇಮು ಚೌವಾಣ್ (17) ಮೃತರು.

ಕುಟುಂಬದವರೆಲ್ಲ ಸೇರಿ ದೇವರ ಹರಕೆ ತೀರಿಸಲು ಸಾವಳಗಿ ತಾಂಡಾಕ್ಕೆ ಕ್ರೂಸರ್ ವಾಹನದಲ್ಲಿ ಮತ್ತು ಈ ಮೂವರು ಬೈಕ್ ಮೆಲೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾತಂರಿಸಲಾಗಿದೆ. ಗೋಗಿ (ಕೆ) ತಾಂಡಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು