ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಇಡಬ್ಲ್ಯುಎಸ್‌ ಜಾರಿಗೆ ಒತ್ತಾಯ

Last Updated 17 ಮಾರ್ಚ್ 2023, 7:45 IST
ಅಕ್ಷರ ಗಾತ್ರ

ಕಲಬುರಗಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(ಇಡಬ್ಲ್ಯುಎಸ್‌) ಕೇಂದ್ರ ಸರ್ಕಾರ ಘೋಷಿಸಿದ ಶೇ 10ರಷ್ಟು ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಬ್ರಾಹ್ಮಣ ಆರ್ಗನೈಸೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ವತಿಯಿಂದ ಗುರುವಾರ ಒಂದು ದಿನ ಸಾಂಕೇತಿಕ ಧರಣಿ ನಡೆಯಿತು.

‘ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ಜಾರಿಗೆ ತಂದು ನಾಲ್ಕು ವರ್ಷ ಕಳೆದಿವೆ. ಇದನ್ನು ರಾಜ್ಯದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರದ ಈ ನಡೆಗೆ ವಿಪ್ರ ಸಮಾಜದ ಮುಖಂಡರಲ್ಲಿ ಅಸಮಾಧಾನ ಉಂಟಾಗಿದೆ’ ಎಂದು ಧರಣಿ ನಿರತರು ಬೇಸರ ವ್ಯಕ್ತಪಡಿಸಿದರು.

‘ತಕ್ಷಣವೇ ಇಡಬ್ಲ್ಯುಎಸ್‌ ಜಾರಿಗೆ ತರದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿ ಆಗುವುದರೊಳಗೆ ಇಡಬ್ಲ್ಯುಎಸ್‌ ಜಾರಿಗೆ ಬರಬೇಕು. ವಿಳಂಬ ಧೋರಣೆ ಅನುಸರಿಸಿದರೆ ಸಂಘಟನೆಯು ರಾಜ್ಯದಾದ್ಯಂತ ವಿಪ್ರರಿಗೆ ಜಾಗೃತಿ ಮೂಡಿಸುವ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಲಿದೆ’ ಎಂದರು.

‘ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ್ದನ್ನು ಯಥಾವತ್ತಾಗಿ ರಾಜ್ಯದಲ್ಲೂ ಜಾರಿಗೆ ಬರಬೇಕು. ಯಾವುದೇ ತಿದ್ದುಪಡಿ ಮಾಡಬಾರದು. ಒಂದು ವೇಳೆ ತಿದ್ದುಪಡಿಗೆ ಮುಂದಾದರೆ ಹೋರಾಟ ನಡೆಸಲಾಗುವುದು’ ಎಂದರು. ರಾಜ್ಯ ಅಧ್ಯಕ್ಷ ರವೀಂದ್ರ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಮುಖಂಡರಾದ ವಿನೂತ ಜೋಶಿ, ಸುರೇಶ ಕುಲಕರ್ಣಿ, ಲಕ್ಷ್ಮಿಕಾಂತ ಖಣದಾಳ, ಯುವ ಅಧ್ಯಕ್ಷ ಗುರುರಾಜ ಕುಲಕರ್ಣಿ, ಸುಧಾಕರ ಕುಲಕರ್ಣಿ, ಶಂಕರಲಿಂಗ, ಪ್ರಸನ್ನ ದೇಶಪಾಂಡೆ, ಪಭು ಆಚಾರ್ಯ, ಕಾವೇರಿ ಜಿಡಗಿಕರ್, ನಿರುಪಮಾ, ಸಂಜೀವರಾವ ಚಕ್ರವರ್ತಿ, ಮುರಳಿಧರ ಕುಲಕರ್ಣಿ, ಗಿರಿರಾಜ ಯಲಮೇಲಿ, ರವಿ ಲಾತೂರಕರ್, ನಾಗೇಶ ಮೊಹರೀರ್, ಸಿದ್ದು ಪಾಟೀಲ, ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ, ರಾಘವೇಂದ್ರ ನೀಲೂರ, ಶ್ರೀರಂಗ ಕರಲಗಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT