ಬುಧವಾರ, ಮೇ 12, 2021
18 °C

ಗಡಿ ಜಿಲ್ಲೆಗಳಲ್ಲಿ ನೆರೆ ರಾಜ್ಯಗಳ ಬಸ್ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ/ಬೀದರ್‌: ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಮನವಿ ಮೇರೆಗೆ ನೆರೆಯ ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸಾರಿಗೆ ನಿಗಮಗಳು ಗಡಿ ಜಿಲ್ಲೆಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿವೆ.

ಶುಕ್ರವಾರ ತೆಲಂಗಾಣದ 150, ಆಂಧ್ರಪ್ರದೇಶದ 32 ಹಾಗೂ ಮಹಾರಾಷ್ಟ್ರದ 85 ಬಸ್‌ಗಳು  ಸಂಚರಿಸಿದವು.

ಈಶಾನ್ಯ ಸಾರಿಗೆ ಸಂಸ್ಥೆಯು ಕಲಬುರ್ಗಿ ಮತ್ತು ಬೀದರ್‌ಗಳಿಂದ ಹೈದರಾಬಾದ್‌ಗೆ ಬಸ್‌ ಸೇವೆ ಆರಂಭಿಸಿದೆ.

34 ಮಂದಿ ನಿವೃತ್ತ ಚಾಲಕರು ಶುಕ್ರವಾರ ಸೇವೆ ನೀಡಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್‌ ತಿಳಿಸಿದ್ದಾರೆ. 

ಸಚಿವರ ಅಭಿನಂದನೆ: ಮುಷ್ಕರದ ಸಂದರ್ಭದಲ್ಲಿ ಕೂಡ ಕರ್ತವ್ಯಕ್ಕೆ ಹಾಜರಾಗಿ ಬಸ್‌ ಓಡಿಸಿದ ಕಲಬುರ್ಗಿ ವಿಭಾಗದ ಚಾಲಕ ಮಹಮದ್‌ ಚಾಂದ್‌ ಪಟೇಲ್‌ ಅವರನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಶುಕ್ರವಾರ ಹುಮನಾಬಾದ್‌ ಬಳಿ ಮಾರ್ಗ ಮಧ್ಯದಲ್ಲಿ ವಾಹನ ನಿಲ್ಲಿಸಿ ಅಭಿನಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.