ಚಿಂಚೋಳಿ: ಪುರಸಭೆ ವ್ಯಾಪ್ತಿಯ ಕಲ್ಯಾಣ ಗಡ್ಡಿ ಬಡಾವಣೆಯ ಸರ್ಕಾರಿ ಕನ್ಯಾ ಶಾಲೆಯ ಬಳಿ ವಿದ್ಯುತ್ ತಂತಿ ಒಂದಕ್ಕೊಂದು ಬೆಸೆದುಕೊಂಡು ಬೆಂಕಿ ಹತ್ತಿದ್ದಲ್ಲದೇ ಕಳಚಿ ಬಿದ್ದು ನೆಲದ ಮೇಲೆ ಪಟಾಕಿಯಂತೆ ಸಿಡಿದು ನಾಗರಿಕರಲ್ಲಿ ಭೀತಿ ಸೃಷ್ಟಿಸಿತು.

ಸುದ್ದಿ ತಿಳಿದು ಬಡಾವಣೆಯ ಯುವ ಮುಖಂಡರು ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಮನವಿ ಮಾಡಿದರು.

ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ವಿದ್ಯುತ್ ಪೂರೈಕೆ ಸ್ಥಗಿತ ಗೊಳಿಸಲು ಸ್ವಲ್ಪ ವಿಳಂಬವಾದರೂ ಅಲ್ಲಿಯೇ ಇದ್ದ ಜೀಪ್, ಕಾರು ಹಾಗೂ ಟ್ರಾಲಿ ಅಟೊ ಬೆಂಕಿಗೆ ಆಹುತಿಯಾಗುವ ಸಾಧ್ಯತೆಯಿತ್ತು.

ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪರಮೇಶ್ವರ ಬಿರಾದಾರ, ಎಇಇ ಕಾಮಣ್ಣ ಇಂಜಳ್ಳಿ ಮಾರ್ಗದರ್ಶನದಲ್ಲಿ ಶಾಖಾಧಿಕಾರಿ ರಾಘವೇಂದ್ರ, ಪವರ್ಮನ್ ಸುರೇಶ ಕುಂಬಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು.

ಬೆಳಿಗ್ಗೆ 7 ಗಂಟೆಗೆ ಘಟನೆ ನಡೆದಿದ್ದು, 4 ತಾಸುಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಸರಿಪಡಿಸಿದ 11.30ಕ್ಕೆ ವಿದ್ಯುತ್ ಪೂರೈಕೆ ಪುನರ್ ಆರಂಭ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.