ಚಿಂಚೋಳಿ: ಮಹಾ ಮಹಿಮಾ ಪುರುಷ ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆಯ ಅಮೃತ ಮಹೋತ್ಸವಕ್ಕೆ ಪದವಿ ಪಟ್ಟಣ ಸಜ್ಜಾಗಿದೆ.

ಜಾತ್ರೆಯ ಅಂಗವಾಗಿ ಫೆ.26ರಂದು ಸಂಜೆ 6 ಗಂಟೆಗೆ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆ ಬಳಿ ಮುಲ್ಲಾಮಾರಿ ನದಿಯಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ರಥೋತ್ಸವ ಜರುಗಲಿದೆ. ಶ್ರೀಮಠದಲ್ಲಿ ಪುರಾಣ ಕಾರ್ಯಕ್ರಮ ನಡೆಯುತ್ತಿದ್ದು ರಥೋತ್ಸವದ ನಂತರ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಪುರಾಣ ಮಹಾಮಂಗಲ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೆಂದ್ರ ಮಹಾಸ್ವಾಮಿಗಳಿಂದ ಸಾಹಿತಿ ಎಸ್.ಎಂ.ಹಿರೇಮಠ ರಚಿಸಿದ ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಕೃತಿ ಲೋಕಾರ್ಪಣೆ ಮಾಡುವರು.

ಕಾರ್ಯಕ್ರಮದಲ್ಲಿ ಸಾಹಿತಿ ಚಿ.ಸಿ.ನಿಂಗಣ್ಣ, ಕಲಾವಿದರಾದ ಯಾದಗಿರಿಯ ಖೇಳಗಿಮಠದ ಮಲ್ಲಿಕಾರ್ಜುನ ಶಾಸ್ತ್ರಿ, ರಾಜಶೇಖರ ಹುಲ್ಲೂರು, ಮಹಾಂತೇಶ ಹುಲ್ಲೂರು ಅವರಿಗೆ ಚನ್ನಶ್ರೀ ಪ್ರಶಸ್ತಿ ತಲಾ 5 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಫಲಕ, ಶಾಲು ಸನ್ಮಾನದೊಂದಿಗೆ ಪ್ರದಾನ ನಡೆಯಲಿದೆ. ಹಿರೇನಾಗಾಂವನ ಜಯ ಶಾಂತಲಿಂಗ ಶಿವಾಚಾರ್ಯರು, ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ, ಶಾಸಕ ಡಾ.ಅವಿನಾಶ ಜಾಧವ, ಸಂಸದ ಸಾಗರ ಖಂಡ್ರೆ ಪಾಲ್ಗೊಳ್ಳುವರು.

ದೊಡ್ಡ ಜಾತ್ರೆ ನಗರ ಸಜ್ಜು:

ಜಾತ್ರೆಯ ಅಮೃತಮಹೋತ್ಸವ ಆಚರಣೆಗೆ ಚಿಂಚೋಳಿ ಪಟ್ಟಣ ಸಜ್ಜಾಗಿದೆ. ತಾಲ್ಲೂಕಿನ ದೊಡ್ಡ ಜಾತ್ರೆ ಎಂಬ ಹಿರಿಮೆ ಹೊಂದಿರುವ ಶಿವಯೋಗಿಗಳ ಜಾತ್ರೆಯ ಅಂಗವಾಗಿ ನಗರದ ವಿವಿಧೆಡೆ ಮಹಾದ್ವಾರ ನಿರ್ಮಿಸಲಾಗಿದೆ. ದೇವಾಲಯಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ. 25ರಂದು ನಗರದಲ್ಲಿ ಪಲ್ಲಕ್ಕಿ ಹಾಗೂ ಉಚ್ಚಾಯಿ ಮೆರವಣಿಗೆ ನಡೆಯಲಿದೆ. ಫೆ.26ರಂದು ಬೆಳಿಗ್ಗೆ ಕುಂಬಕಳಸದ ಮೆರವಣಿಗೆ ಅಭಿಷೇಕ, ತಾತನವರ ತೊಟ್ಟಿಲೋತ್ಸವ ಮಹಾ ಪ್ರಸಾದ ಸೇರಿದಂತೆ ವಿವಿಧ ಕೈಕಂಕರ್ಯಗಳು ಭಕ್ತಿ ಶ್ರದ್ಧೆಯಿಂದ ನಡೆಯಲಿವೆ.

ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆಯ ಅಮೃತ ಮಹೋತ್ಸವ ವೈಭವ ಚಿಂಚೋಳಿಯಲ್ಲಿ ಮನೆ ಮಾಡಿದೆ. ಶಿವಯೋಗಿಗಳ ಜಯಂತಿ ಪ್ರಯುಕ್ತ ಚಿಂಚೋಳಿಯಲ್ಲಿ ಪುಣ್ಯಸ್ಮರಣೆ ಪ್ರಯುಕ್ತ ಹಾರಕೂಡದಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತಿದೆ. ಚಿಂಚೋಳಿ ಜಾತ್ರೆಗೆ 75ನೇ ವರ್ಷದ ಸಂಭ್ರಮ ಚನ್ನವೀರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಹಾರಕೂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.