ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಶಿಶುವಿನ ಶವ ಚರಂಡಿಯಲ್ಲಿ ಪತ್ತೆ

Last Updated 17 ಅಕ್ಟೋಬರ್ 2020, 6:18 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ):ತಾಲ್ಲೂಕಿನ ಐನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಮುಖ್ಯರಸ್ತೆಯ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ.

ಈ ಶಿಶು ಹೆಣ್ಣು ಅಥವಾ ಗಂಡು ಎಂಬುದು ತಿಳಿದು ಬಂದಿಲ್ಲ. ಸಮೀಪದಲ್ಲೇ ಖಾಸಗಿ ಆಸ್ಪತ್ರೆ ಇದೆ. ಈ‌ ಬಗ್ಗೆ ಹೆಚ್ಚಿನ ತನಿಖೆ ನಂತರವೇ ಶಿಶು ಯಾರು ಬಿಟ್ಟಿದ್ದಾರೆ ಎಂಬುದು ತಿಳಿಯಲಿದೆ. ಶಿಶು ಪತ್ತೆಯಾದ ಸ್ಥಳದಲ್ಲಿ ಇರುವಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಗೆ ಸೂಚಿಸಲಾಗಿದೆ. ಚಿಂಚೋಳಿಯಿಂದ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿಯನ್ನು ಕಳುಹಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರು ಪ್ರಸಾದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT