ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಯಕರ್ತರಲ್ಲಿ ಭೇದ ಭಾವ ಬೇಡ’

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ನೂರಕ್ಕೂ ಹೆಚ್ಚು ಮುಖಂಡರು
Last Updated 17 ಏಪ್ರಿಲ್ 2021, 8:34 IST
ಅಕ್ಷರ ಗಾತ್ರ

ಕಾಳಗಿ: ‘ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಮೂಲ ಮತ್ತು ವಲಸೆ ಎಂಬ ಭೇದ ಭಾವ ಇರಬಾರದು. ಪಕ್ಷ ಎಲ್ಲರನ್ನು ಸಮಾನವಾಗಿ ಕಾಣುತ್ತದೆ’ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಹಮ್ಮಿ ಕೊಂಡಿದ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾದವರನ್ನು ಸ್ವಾಗತಿಸಿ ಅವರು ಮಾತನಾಡಿದರು.

‘ಬಿಜೆಪಿಯಲ್ಲಿ ಇರುವವರು ಎಲ್ಲರೂ ಒಂದೇ ಆಗಿರಬೇಕು. ಅದನ್ನು ಬಿಟ್ಟು ಅವರು ಈಗ ಬಂದಿದ್ದಾರೆ, ನಾವು ಮೊದಲಿನಿಂದ ಇದ್ದಿದ್ದೇವೆ ಎಂದು ಯಾರೊಬ್ಬರೂ ವಕ್ರದೃಷ್ಟಿಯಿಂದ ಕಾಣಬಾರದು. ತಾರತಮ್ಯ ಮಾಡದೆ ಪಕ್ಷದ ಏಳಿಗೆಗೆ ಶ್ರಮಿಸಬೇಕು’ ಎಂದು ಕರೆ ನೀಡಿದರು.

‘ಕೋವಿಡ್ 2ನೇ ಅಲೆ ಶುರುವಾಗಿದೆ. ಪ್ರತಿಯೊಬ್ಬರೂ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಜೀವ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಾಸಕ ಡಾ.ಅವಿನಾಶ ಜಾಧವ ಸಸಿಗೆ ನೀರು ಸುರಿದು ಕಾರ್ಯಕ್ರಮ ಉದ್ಘಾಟಿಸಿದರು.

ಕಾಂಗ್ರೆಸ್ ಮುಖಂಡ ಕೆ.ಎಂ.ಬಾರಿ, ನಿಂಬೆಣ್ಣಪ್ಪ ಸಾಹು ಮಂಗಲಗಿ, ಶಿವಶರಣಪ್ಪ ಚೆನ್ನೂರ, ಶಿವರಾಜ ಪಾಟೀಲ ಗೊಣಗಿ, ಅಮರ ಲೊಡ್ಡನಕರ್, ಹಣಮಂತ ಕಣ್ಣಿ, ಫಾರೂಕ ಮಂಗಲಗಿ, ಮಶಾಖ ಪಟೇಲ್ ಸೇರಿದಂತೆ ವಿವಿಧ ಗ್ರಾಮಗಳ ನೂರಕ್ಕೂ ಹೆಚ್ಚು ಜನರು ಕಾಂಗ್ರೆಸ್ ತೊರೆದು ಬಿಜೆಪಿ ಧ್ವಜ ಹಿಡಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ, ಚಿಂಚೋಳಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಮುಖಂಡರಾದ ಸಂತೋಷ ಪಾಟೀಲ ಮಂಗಲಗಿ, ಉಮೇಶ ಚವಾಣ, ಗುಂಡಪ್ಪ ಮಾಳಗಿ, ಚಂದ್ರಕಾಂತ ಜಾಧವ, ಶಿವಶರಣಪ್ಪ ಗುತ್ತೇದಾರ, ಪ್ರಶಾಂತ ಕದಂ, ರಮೇಶ ಕಿಟ್ಟದ, ರಾಜೇಂದ್ರಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT