ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಲಂಚ ಕೊಡಬೇಡಿ: ಸಂಸದ ಡಾ.ಉಮೇಶ ಜಾಧವ

Last Updated 14 ಫೆಬ್ರುವರಿ 2022, 5:16 IST
ಅಕ್ಷರ ಗಾತ್ರ

ಕಾಳಗಿ: ‘ಪಟ್ಟಣದ ಕೊಳಗೇರಿ ಪ್ರದೇಶದ 8 ವಾರ್ಡ್‌ಗಳಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ₹48ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ 737ಮನೆಗಳ ಕಾಮಗಾರಿಯಲ್ಲಿ ಯಾರಿಗೂ ನಯಾಪೈಸೆ ಲಂಚ ಕೊಡಬೇಡಿ’ ಎಂದು ಸಂಸದ ಡಾ.ಉಮೇಶ ಜಾಧವ ಜನತೆಗೆ ಕರೆ ನೀಡಿದರು.

ಭಾನುವಾರ ಪಟ್ಟಣದಲ್ಲಿ ಜರುಗಿದ ಕೊಳಗೇರಿ ಪ್ರದೇಶದ ಮನೆಗಳ ನಿರ್ಮಾಣ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು.

‘ಹೊಸ ತಾಲ್ಲೂಕುಗಳಲ್ಲಿ ಕಾಳಗಿ ಮೊದಲ ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಲಾಗಿದೆ. 8 ವಾರ್ಡ್‌ಗಳನ್ನು ಕೊಳಗೇರಿ ಪ್ರದೇಶಗಳನ್ನಾಗಿ ಅಸ್ತಿತ್ವಕ್ಕೆ ತರಲಾಗಿದೆ. ತಾಂಡಾಗಳಿಗೆ ಸಂಪರ್ಕ ರಸ್ತೆ ಕಲ್ಪಿಸಿದಷ್ಟೇ ಅಲ್ಲ, ನ್ಯಾಯ ಬೆಲೆ ಅಂಗಡಿಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕೆಲಸ ಆಗಿರಲಿಲ್ಲ ಅಂದ್ರೆ ಹೇಳಿ ಮಾಡಿಸಿಕೊಳ್ಳಬೇಕು’ ಎಂದು ಜನರಿಗೆ ತಿಳಿಸಿದರು.

ಶಾಸಕ ಡಾ.ಅವಿನಾಶ ಜಾಧವ ಮಾತನಾಡಿದರು.

ಜಿ.ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ಕಾಡಾ ನಿರ್ದೇಶಕ ಮಲ್ಲಿನಾಥ ಕೋಲಕುಂದಿ, ಕೋಲಿ ಸಮಾಜ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಅವುಂಟಿ, ಮುಖಂಡರಾದ ರಾಮಚಂದ್ರ ಜಾಧವ, ಉಮೇಶ ಚವಾಣ, ಪಟ್ಟಣ ಪಂಚಾಯಿತಿ ನೂತನ ಸದಸ್ಯರಾದ ಶಿವಶರಣಪ್ಪ ಗುತ್ತೇದಾರ, ಕೇಸು ಚವಾಣ, ಕಾಳಶೆಟ್ಟಿ ಪಡಶೆಟ್ಟಿ, ತಾ.ಪಂ ಮಾಜಿ ಸದಸ್ಯ ಚಂದ್ರಕಾಂತ ಜಾಧವ, ಸಂತೋಷ ಪಾಟೀಲ, ರಮೇಶ ಕಿಟ್ಟದ, ಕೆ.ಎಂ.ಬಾರಿ, ವಿಷ್ಣು ಪರುತೆ, ಪ್ರಶಾಂತ ಕದಂ, ಮಹೇಂದ್ರ ಪೂಜಾರಿ, ಶ್ರೀಮಂತ ನಾಮದಾರ, ಇಬ್ರಾಹಿಂಪಾಶಾ ಗಿರಣಿಕರ್, ಮಲ್ಲು ಮರಗುತ್ತಿ, ವಿಜಯಕುಮಾರ ಚೇಂಗಟಾ, ಹಣಮಂತ ಒಡೆಯರಾಜ, ಸಂತೋಷ ಜಾಧವ ವೇದಿಕೆಯಲ್ಲಿದ್ದರು.

ಶೇಖರ ಪಾಟೀಲ ನಿರೂಪಿಸಿದರು. ಇದಕ್ಕೂ ಮುಂಚೆ ಬಿಜೆಪಿ ಹಿಂದುಳಿದ ಮೋರ್ಚಾದ ಕಾರ್ಯಕಾರಿಣಿ ಸಭೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT