ಮಂಗಳವಾರ, ಆಗಸ್ಟ್ 3, 2021
28 °C

ಸೇಡಂ: ತಾಲ್ಲೂಕಿನಲ್ಲಿ ಕೋವಿಡ್‌ಗೆ ಮೊದಲ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ತಾಲ್ಲೂಕಿನ ಗೋಪನಪಲ್ಲಿ ಗ್ರಾಮದ 50 ವರ್ಷದ ಪುರುಷ ಮಂಗಳವಾರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ವರದಿ ಗುರುವಾರ ಬಂದಿದ್ದು ಕೋವಿಡ್–19ನಿಂದಲೇ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ಗುರುವಾರ ಬಹಿರಂಗ ಪಡಿಸಿವೆ.

ಮೊದಲಿನಿಂದಲೂ ಆನೆಕಾಲು ರೋಗ ಇರುವುದರಿಂದ ಚಿಕಿತ್ಸೆ ಪಡೆಯಲು ಗುರಮಠಕಲ್, ಸೇಡಂ, ಕಲಬುರ್ಗಿ ಕಡೆಗಳಲ್ಲಿ ಈ ವ್ಯಕ್ತಿ ಅಲೆದಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದಾಗಿ ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬರುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆಗೆ ಹೆಚ್ಚಿನ ಜನ ಸೇರಿರಲಿಲ್ಲ. ವರದಿ ಬಂದ ನಂತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸುಮಾರು 40ಕ್ಕೂ ಅಧಿಕ ಜನರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಗೋಪನಪಲ್ಲಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.

ಗುರುವಾರ ಒಂದೇ ದಿನ ಸೇಡಂ ತಾಲ್ಲೂಕಿನಲ್ಲಿ 23 ಕೋವಿಡ್ ಪ್ರಕರಣ ದೃಢಪಟ್ಟಿವೆ. ಸೇಡಂ, ಬಟಗೇರಾ, ಸೂರವಾರ, ನಾಡೆಪಲ್ಲಿ, ಕೋಲ್ಕುಂದಾ, ದುಗನೂರ ಗ್ರಾಮದ ಸೋಂಕಿತರು ಇದರಲ್ಲಿ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.