ಬುಧವಾರ, ಮೇ 12, 2021
24 °C

ಅಬಕಾರಿ ದಾಳಿ: ₹ 1.5 ಲಕ್ಷ ಮೌಲ್ಯದ ಮದ್ಯ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಹುಮನಾಬಾದ್‌ ರಸ್ತೆ, ಸ್ಟೇಷನ್‌ ಏರಿಯಾ, ನೆಹರೂ ಗಂಜ್‌ ಹಾಗೂ ತಾಲ್ಲೂಕಿನ ನಂದಿಕೂರ ಗ್ರಾಮದಲ್ಲಿ ಈಚೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ₹ 1.5 ಲಕ್ಷ ಮೌಲ್ಯದ ಅಕ್ರಮ ಮದ್ಯ ಹಾಗೂ ನಾಲ್ಕು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಕಲಬುರ್ಗಿ– ಹುಮನಾಬಾದ್‌ ರಸ್ತೆಯ ಉಪಳಾಂವ ಕ್ರಾಸ್‌ ಹತ್ತಿರ ಅಬಕಾರಿ ಉಪ ಅಧೀಕ್ಷಕ ಮಹ್ಮದ್‌ ಇಸ್ಮಾಯಿಲ್‌ ಇನಾಮದಾರ, ಸ್ಟೇಷನ್‌ ಏರಿಯಾದಲ್ಲಿ ಅಬಕಾರಿ ನಿರೀಕ್ಷಕರಾದ ಸಂತೋಷಕುಮಾರ, ನೆಹರೂ ಗಂಜ್‌ ಏರಿಯಾದಲ್ಲಿ ಪ್ರವೀಣಕುಮಾರ ಹಾಗೂ ಬಸವರಾಜ ಉಳ್ಳೆಸೂಗೂರು, ನಂದಿಕೂರ ಗ್ರಾಮದಲ್ಲಿ ಮಲ್ಲಿಕಾರ್ಜುನ ಡಿ.ಹಾಗೂ ನರೆಂದ್ರಕುಮಾರ ದಾಳಿ ನಡೆಸಿದ್ದಾರೆ.

ಅಬಕಾರಿ ಅಧಿಕಾರಿಗಳಾದ ಪ್ರವೀಣಕುಮಾರ, ಬಸವರಾಜ ಉಳ್ಳೆಸೂಗೂರು, ಕಾನ್‌ಸ್ಟೆಬಲ್‌ಗಳಾದ ಬಸವರಾಜ ಎಂ., ಸಿದ್ದಮಲ್ಲಪ್ಪ , ರವಿಕುಮಾರ, ಭೀಮಶೇನರಾವ್‌, ರಾಜೇಂದ್ರನಾಥ, ವಸಂತಕುಮಾರ, ಶಿವಪ್ಪಗೌಡ , ವಾಹನ ಚಾಲಕರಾದ ಸುನೀಲಕುಮಾರ, ವೆಂಕಟೇಶ ಹಾಗೂ ಸಂತೋಷ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು