ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಪರಿಸರದಿಂದ ಮಾತ್ರ ಆರೋಗ್ಯ

ಸ್ವಚ್ಛ ಕಲಬುರ್ಗಿ ಕುರಿತ ರಂಗೋಲಿ ಸ್ಪರ್ಧೆ ಉದ್ಘಾಟಿಸಿದ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಅಭಿಮತ
Last Updated 23 ಡಿಸೆಂಬರ್ 2020, 3:09 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಗರದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ ಪರಿಸರದ ಸುತ್ತಲಿನ ಸ್ವಚ್ಛತೆ ಬಗ್ಗೆ ಗಮನ ಕೊಟ್ಟರೆ ಯಾವುದೇ ರೋಗ ನಮ್ಮ ಬಳಿ ಸುಳಿಯುವುದಿಲ್ಲ.‌ ಇಲ್ಲದಿದ್ದರೆ ಪಾಲಿಕೆಯ ಪೌರಕಾರ್ಮಿಕರ ಶ್ರಮ ಹಾಗೂ ನಮ್ಮ ತೆರಿಗೆ ಹಣ ಎಲ್ಲವೂ ವ್ಯರ್ಥವಾಗುತ್ತದೆ’ ಎಂದು ಸಾಹಿತಿ ಸಂಧ್ಯಾ ಹೊನಗುಂಟಿಕರ್‌ ಹೇಳಿದರು.

‌ಇಲ್ಲಿನಮಾರ್ಗದರ್ಶಿ ಸಂಸ್ಥೆ, ರೈಲ್ವೆ ಚೈಲ್ಡ್ ಲೈನ್‌ ಹಾಗೂ ಮಾರ್ಗದರ್ಶಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ತಾರಪೈಲ್ ಬಡವಣೆಯಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸ್ವಚ್ಛ ಕಲಬುರ್ಗಿ ಕುರಿತು ಜಾಗೃತಿಗಾಗಿ ರಂಗೋಲಿ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾನಗರ ಪಾಲಿಕೆಯು ಕಸ ತೆಗೆಯಲು ತುಂಬ ಖರ್ಚ ಮಾಡುತ್ತಿದೆ. ನಗರದಲ್ಲಿ ಪ್ರತಿ ದಿನ ಒಂದು ಊರು ತುಂಬುವಷ್ಟು ಕಸ ಸಂಗ್ರಹವಾಗುತ್ತಿದೆ. ಇಷ್ಟೊಂದು ಕಸವನ್ನು ವಿಲೇವಾರಿ ಮಾಡುವುದೇ ಸವಾಲು. ಹಾಗಾಗಿ, ಕಸದಿಂದ ರಸ ತೆಗೆಯುವಂಥ ತಾಂತ್ರಿಕ ಶಕ್ತಿಗಳು ಇದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ’ ಎಂದರು.

‘ನಾವು ಚಿಕ್ಕವರಿದ್ದಾಗ ಆಸ್ಪತ್ರೆಗಳು ಕಾಣುತ್ತಿರಲಿಲ್ಲ. ಸಾಂಕ್ರಾಮಿಕ ರೋಗಗಳೂ ಅಪರೂಪವಾಗಿದ್ದವು. ಆಸ್ಪತ್ರೆಗೆ ಹೋಗಬೇಕಾದರೆ ಕಿಲೋಮೀಟರ್‌ ದೂರ ನಡೆದುಕೊಂಡು ಹೊಗಬೇಕಾದ ಸ್ಥಿತಿ ಇತ್ತು. ಆದರೆ, ಈಗಿನ ಪರಿಸ್ಥಿತಿಯೇ ಬೇರೆ. ನಾವು ಇರುವಲ್ಲಿಯೇ ಆಸ್ಪತ್ರೆಗಳನ್ನು ಕಾಣುತ್ತಿದ್ದೇವೆ. ಅಷ್ಟರಮಟ್ಟಿಗೆ ನಾವು ಪರಿಸರ ಮಲಿನ ಮಾಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು. ಮನೆಯಿಂದ ಹೊರಗಡೆ ಬರಬೇಕು. ಮನೆಯಿಂದಲೇ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕು. ಆಗ ಸಮಾಜದಲ್ಲೂ ಬೆಳೆಯಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾರ್ಗದರ್ಶಿ ಸಂಸ್ಥೆ ನಿರ್ದೆಶಕ ಆನಂದರಾಜ, ‘ನಗರವನ್ನು ಸ್ವಚ್ಛ– ಸುಂದರ ಮಾಡಬೇಕು. ನಮ್ಮ ಆರೋಗ್ಯ ಸುಧಾರಣೆಗಾಗಿ ನಾವು ಸ್ವಚ್ಛತೆ ಅನುಸರಿಸಬೇಕು. ನನ್ನ ಕಸ ನನ್ನ ಜವಾಬ್ದಾರಿ ಎಂಬುದು ಜನರ ಮನಸಲ್ಲಿ ಬರಬೇಕು’ ಎಂದರು.

ಮುಖ್ಯ ಅತಿಥಿಯಾಗಿದ್ದಸಪಾಯಿ ಕರ್ಮಚಾರಿಗಳ ಆಯೋಗದ ಸದಸ್ಯೆಗೀತಾ ರಾಜು ವಾಡೆಕರ್, ‘ಮಹಿಳೆಯರಾದ ನಮಗೆ ಗೊತ್ತು; ಒಂದು ದಿನದಲ್ಲಿ ನಮ್ಮ ಮನೆಯಿಂದ ಎಷ್ಷು ಕಸ ಬರುತ್ತದೆ ಎಂಬುದು. ಅದನ್ನು ವಿಲೇವಾರಿ ಮಾಡುವುದು ಹೇಗೆ ಎಂಬುದನ್ನು ವಿಚಾರ ಮಾಡುತ್ತೇವೆ. ಆದರೆ, ಪೌರಕಾರ್ಮಿಕರು ಬಂದಾಗ ಅವರಿಗೆ ನಾವು ಸಹಕರಿಸುವುದಿಲ್ಲ. ಅವರು ಇಡೀ ನಗರದ ಕಸ ವಿಲೇವಾರಿ ಮಾಡಬೇಕು. ಬೆಳಿಗ್ಗೆ ಚಳಿಯಲ್ಲಿ ಮನೆ ಮುಂದೆ ಬರುವ‍ಪೌರ ಕಾರ್ಮಿಕರನ್ನು ಸೌಜನ್ಯದಿಂದ, ಗೌರವದಿಂದ ನಡೆಸಿಕೊಳ್ಳುವವರು ಕಡಿಮೆ. ಆತ್ಮೀಯತೆಯಿಂದ ಒಮ್ಮೆ ಕರೆದು ಚಹಾ ಕುಡಿಯಿ ಎಂದು ಹೇಳಿದರೆ ಸಾಕು; ಅವರು ಎಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಬಲ್ಲರು ಎಂಬುದು ಗೊತ್ತಾಗುತ್ತದೆ’ ಎಂದರು.

ವಿಶೇಷ ಉಪನ್ಯಾಸ ನೀಡಿದ ನೀಲಮ್ಮನ ಬಳಗದ ಮುಖಂಡರಾದ ಜಯಶ್ರೀ ಚಟ್ನಳ್ಳಿ, ‘ಮಹಿಳೆಯರು ಮನೆಯ ಹತ್ತಿರ ಖಾಲಿ ಜಾಗದಲ್ಲಿ ಹಾಕಬಾರದು. ಮಹಾನಗರ ಪಾಲಿಕೆಯಿಂದ ಕಸದ ತೊಟ್ಟಿ ಇದ್ದರೂ ಅದರಲ್ಲಿ ಹಾಕುವುದಿಲ್ಲ. ಮಹಾನಗರ ಪಾಲಿಕೆಯ ಅಂಕಿ– ಅಂಶಗಳ ಪ್ರಕಾರ ಒಂದು ತೊಟ್ಟಿಯು ಎರಡರಿಂದ ಮೂರು ದಿನದಲ್ಲಿ ತುಂಬುತ್ತದೆ. ಅದನ್ನು ವಿಲೇವಾರಿ ಮಾಡುವಷ್ಟರಲ್ಲಿ ಸುತ್ತಲಿನ ಪರಿಸರದಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಹಸಿ– ಒಣ ಕಸ ವಿಂಗಡಿಸಿ ನೀಡಬೇಕು’ ಎಂದರು.

ಮುಖ್ಯ ಅತಿಥಿಗಳಾಗಿ ಪಾಲಿಕೆ ಮಾಜಿ ಸದಸ್ಯೆಲತಾ ರವಿ ರಾಠೋಡ ಮಾತನಾಡಿದರು.‌ವಿಶೇಷ ಅಹ್ವಾನಿತರಾದ ಮಾರ್ಗದರ್ಶಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದಯಶೋದಾ ಭಾಗವಹಿಸಿದ್ದರು. ಸುಂದರ, ಆಶೋಕ, ಶಿಲ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT