ಶುಕ್ರವಾರ, ಆಗಸ್ಟ್ 12, 2022
22 °C

ಕಲಬುರ್ಗಿ: ಪತ್ರಿಕಾ ವಿತರಕರಿಗೆ ಕಿಟ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಡಿಸಿಸಿ ಬ್ಯಾಂಕ್‌ ವತಿಯಿಂದ ನಗರದ ಪತ್ರಿಕಾ ವಿತರಕರಿಗೆ ಶುಕ್ರವಾರ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಬ್ಯಾಂಕಿನ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಕಿಟ್‌ಗಳನ್ನು ವಿತರಿಸಿದರು. ‘ಕೊರೊನಾದಿಂದ ಕಷ್ಟದಲ್ಲಿರುವವರಿಗೆ ಪ್ರತಿಯೊಬ್ಬರೂ ಸ್ಪಂದಿಸಬೇಕಿದೆ. ಪತ್ರಿಕೆ ವಿತರಣೆ ಮಾಡುವವರು ಪ್ರತಿ ದಿನ ನಗರದಲ್ಲಿ ಸುತ್ತಬೇಕಾಗುತ್ತದೆ. ಅವರ ಜೀವನವೂ ಸಂಕಷ್ಟದಲ್ಲಿದೆ. ಹಾಗಾಗಿ, ಬ್ಯಾಂಕಿನಿಂದ ಕಿಟ್‌ ವಿತರಿಸಲಾಗುತ್ತಿದೆ’ ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಸಜ್ಜನ್‌, ನಿರ್ದೆಶಕರಾದ ಶರಣ ಬಸಪ್ಪ ಪಾಟೀಲ ಅಷ್ಟಗಾ, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ, ಬಸವರಾಜ ಪಾಟೀಲ, ನಿಂಗಣ್ಣ ದೊಡ್ಮನಿ, ಸಿದ್ರಾಮರಡ್ಡಿ ಕೌಳೂರ, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು