ಬುಧವಾರ, ಸೆಪ್ಟೆಂಬರ್ 22, 2021
27 °C

ಕಲಬುರ್ಗಿ | ಕೆರೆಯಲ್ಲಿ ಮುಳುಗಿ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ (ಕಲಬುರ್ಗಿ ಜಿಲ್ಲೆ): ಈಜಾಡಲು ಕೆರೆಗಿಳಿದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಹೊಡಿ ಹೊಳ್ಳ ತಾಂಡಾದಲ್ಲಿ ಶುಕ್ರವಾರ ನಡೆದಿದೆ.

ಸತೀಶ್ ವಸಂತ ಜಾಧವ (16) ಮೃತ ಯುವಕ.

ಗುರುವಾರ ಮಧ್ಯಾಹ್ನ 2 ಕ್ಕೆ ನಾಲ್ವರು ಯುವಕರು ಸೇರಿ ಬಂಡನಕೇರಾ ತಾಂಡಾ ಸಮೀಪದ ಕೆರೆಗೆ ಈಜಾಡಲು ಹೋಗಿದ್ದರು. ಸತೀಶ ಒಳಗಡೆ ಮುಳುಗಿದ್ದು ಮೇಲೇಳಲೇ ಇಲ್ಲ ಇಲ್ಲ. ನಂತರ  ತಾಂಡಾ ನಿವಾಸಿಗಳಿಗೆ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಆಗಮಿಸಿ 24 ಗಂಟೆ ಕಾರ್ಯಚರಣೆ ನಡೆಸಿದ್ದು ಗುರುವಾರ ಮಧ್ಯಾಹ್ನ 2 ಕ್ಕೆ ಮೃತ ದೇಹ ಹೊರ ತೆಗೆದಿದ್ದಾರೆ.

ಅಗ್ನಿ ಶಾಮಕ ಠಾಣಾಧೀಕಾರಿ ಶಿವರಾಜ್, ಸಿಬ್ಬಂದಿ ಮಹಾದೇವ, ಅಮರೇಶ, ರಮೇಶ, ವಿಜಯ ಪವಾರ, ವೆಂಕಟ್, ಸುಶೀಲಕುಮಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು